ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದ ಪೃಥ್ವಿ ಶಾ ಕೇವಲ 99 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. 

ರಾಜ್’ಕೋಟ್[ಅ.04]: ಮುಂಬೈ ಯುವ ಪ್ರತಿಭೆ ಪೃಥ್ವಿ ಶಾ ಪದಾರ್ಪಣ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸುವ ಮೂಲಕ ಅಂತರಾಷ್ಟ್ರೀಯ ವೃತ್ತಿ ಜೀವನವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ. ಈ ಮೂಲಕ ಪದಾರ್ಪಣ ಪಂದ್ಯದಲ್ಲೇ ಶತಕ ಸಿಡಿಸಿ ಭಾರತದ ಅತಿ ಕಿರಿಯ ಆಟಗಾರ ಎನ್ನುವ ಗೌರವಕ್ಕೆ ಪೃಥ್ವಿ ಪಾತ್ರರಾಗಿದ್ದಾರೆ.

Scroll to load tweet…
Scroll to load tweet…
Scroll to load tweet…

ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದ ಪೃಥ್ವಿ ಶಾ ಕೇವಲ 99 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮುಂಬೈನ ಯುವ ಪ್ರತಿಭೆ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಪದಾರ್ಪಣ ಪಂದ್ಯದಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ವಿಶ್ವದ ಮೂರನೇ ಕ್ರಿಕೆಟಿಗ, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 15ನೇ ಬ್ಯಾಟ್ಸ್’ಮನ್ ಎನ್ನುವ ಹಿರಿಮೆಯು ಪೃಥ್ವಿ ಶಾ ಪಾಲಾಗಿದೆ.

ಕ್ರಿಕೆಟ್’ನಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪೃಥ್ವಿ ರಣಜಿ ಕ್ರಿಕೆಟ್, ದುಲಿಪ್ ಟ್ರೋಫಿ ಬಳಿಕ ಇದೀಗ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್’ನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ. ಶಿಖರ್ ಧವನ್ ಬಳಿಕ ಪದಾರ್ಪಣ ಪಂದ್ಯದಲ್ಲೇ ಶತಕ ಸಿಡಿಸಿದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಶಾ ಪಾತ್ರರಾಗಿದ್ದಾರೆ.

ಇದೀಗ ಭಾರತ ಒಂದು ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿದ್ದು ಶಾ 101* ಹಾಗೂ ಪೂಜಾರ 67* ಇನ್ನಿಂಗ್ಸ್ ಮುಂದುವರೆಸಿದ್ದಾರೆ.