ವೆಸ್ಟ್ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಪೃಥ್ವಿ ಶಾ ನೀಡಿದ ತೀರ್ಪಿಗೆ ಅಂಪೈರ್ ಇಯಾನ್ ಗೋಲ್ಡ್ ಮೈದಾನದಲ್ಲೇ ಕ್ಷಮೇ ಕೇಳಿದ್ದಾರೆ. ವೆಸ್ಟ್ಇಂಡೀಸ್ ವೇಗಿ ಬಳಿ ಅಂಪೈರ್ ಕ್ಷಮೆ ಕೇಳಿದ ವೀಡಿಯೋ ಇದೀಗ ವೈರಲ್ ಆಗಿದೆ.
ಹೈದರಾಬಾದ್(ಅ.15): ಭಾರತ ಹಾಗೂ ವೆಸ್ಟ್ಇಂಡೀಸ್ ವಿರುದ್ದದ ಟೆಸ್ಟ್ ಸರಣಿ ಅಂತ್ಯಗೊಂಡಿದೆ. ಟೀಂ ಇಂಡಿಯಾ 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ. ಹೈದರಾಬಾದ್ ಟೆಸ್ಟ್ ಪಂದ್ಯವನ್ನೂ ಮೂರೇ ದಿನಕ್ಕೆ ಮುಗಿಸಿದ ಹೆಗ್ಗಳಿಕೆಗೆ ವಿರಾಟ್ ಸೈನ್ಯ ಪಾತ್ರವಾಯಿತು.
ಈ ಪಂದ್ಯದಲ್ಲಿ ಭಾರತ ಗೆಲುವಿಗೆ 72 ರನ್ ಗುರಿ ಪಡೆದಿತ್ತು. ಈ ಗುರಿ ಬೆನ್ನಟ್ಟುತ್ತಿದ್ದ ಭಾರತಕ್ಕೆ ಆರಂಭಿಕ ಪೃಥ್ವಿ ಶಾ ಹಾಗೂ ಕೆಎಲ್ ರಾಹುಲ್ ಆಸರೆಯಾಗಿದ್ದರು. ಆದರೆ ಅಂಪೈರ್ ಇಯಾನ್ ಗೋಲ್ಡ್ ಪೃಥ್ವಿ ಶಾಗೆ ಆರಂಭದಲ್ಲೇ ಜೀವದಾನ ನೀಡಿದ್ದರು. ತಮ್ಮ ತೀರ್ಪು ತಪ್ಪೆಂದು ತಿಳಿಯುತ್ತಿದ್ದಂತೆ ಮೈದಾನದಲ್ಲಿ ಗೌಲ್ಡ್ ಕ್ಷಮೆ ಕೇಳಿದ್ದಾರೆ.
2ನೇ ಇನ್ನಿಂಗ್ಸ್‌ನ 5ನೇ ಓವರ್‌ನಲ್ಲಿ ವಿಂಡೀಸ್ ವೇಗಿ ಜಾಸನ್ ಹೋಲ್ಡರ್ ಎಸೆತ ನೇರವಾಗಿ ಪೃಥ್ವಿ ಶಾ ಕೈಗೆ ಬಡಿದಿತ್ತು. ಔಟ್‌ಗಾಗಿ ಮನವಿ ಮಾಡಿದರೂ ಇಯಾನ್ ಗೌಲ್ಡ್ ನಾಟೌಟ್ ತೀರ್ಪು ನೀಡಿದ್ದರು. ಆದರೆ ಇದು ಔಟಾಗಿತ್ತು. ತೀರ್ಪು ನೀಡಿದ ಬಳಿಕ ಅಂಪೈರ್‌ಗೆ ತಪ್ಪು ಅರಿವಾಗಿದೆ. ತಕ್ಷಣದಲ್ಲೇ ಜಾಸನ್ ಹೋಲ್ಡರ್ ಬಳಿ ಕ್ಷಮೆ ಕೇಳಿದ್ದಾರೆ.
