ವೆಸ್ಟ್ಇಂಡೀಸ್ ವಿರುದ್ಧದ ಸರಣಿ ಗೆಲುವು ಸಾಧಿಸಿದ ಟೀಂ ಇಂಡಿಯಾ ದಾಖಲೆ ಬರೆದಿದೆ. ಪಂದ್ಯವನ್ನ ಮೂರೇ ದಿನಕ್ಕೆ ಮುಗಿಸಿ ಇದೀಗ ವಿಶ್ರಾಂತಿ ಜಾರಿದೆ. ಈ ದಾಖಲೆ ಗೆಲುವಿಗೆ ಟ್ವಿಟರಿಗರು ಹೇಳಿದ್ದೇನು? ಇಲ್ಲಿದೆ.
ಹೈದರಾಬಾದ್(ಅ.14): ವೆಸ್ಟ್ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಟೀಂ ಇಂಡಿಯಾ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಉಮೇಶ್ ಯಾದವ್ ಬೌಲಿಂಗ್, ಪೃಥ್ವಿ ಶಾ, ರಿಷಬ್ ಪಂತ್ ಬ್ಯಾಟಿಂಗ್ ಹೈದರಾಬಾದ್ ಪಂದ್ಯದಲ್ಲಿ ಗೆಲುವಿಗೆ ಕಾರಣವಾಯಿತು.
ಟೀಂ ಇಂಡಿಯಾ ಭರ್ಜರಿ ಗೆಲುವಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ಗೆಲುವಿಗೆ ಟ್ವಿಟರಿಗರ ಪ್ರತಿಕ್ರಿಯೆ ಇಲ್ಲಿದೆ.
;
