ಅಂತಿಮ ಓವರ್’ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 14 ರನ್’ಗಳ ಅವಶ್ಯಕತೆಯಿದ್ದವು. ಆದರೆ ಉಮೇಶ್ ಯಾದವ್ ಕೇವಲ 13 ರನ್’ಗಳನ್ನು ನೀಡುವ ಮೂಲಕ ಪಂದ್ಯ ರೋಚಕ ಟೈ ಆಗುವಂತೆ ಮಾಡುವಲ್ಲಿ ಯಶಸ್ವಿಯಾದರು. 

ಬೆಂಗಳೂರು[ಅ.25]: ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ರೋಚಕ ಟೈನೊಂದಿಗೆ ಅಂತ್ಯ ಕಂಡಿದೆ. ಕೊನೆಯ ಕ್ಷಣದವರೆಗೂ ಫಲಿತಾಂಶ ತೂಗುಯ್ಯಾಲೆಯಂತಾಗಿದ್ದ ಪಂದ್ಯ ಕೊನೆಯ ಎಸೆತದಲ್ಲೂ ಫಲಿತಾಂಶ ಹೊರಬೀಳಲಿಲ್ಲ.

Add Asianetnews Kannada as a Preferred SourcegooglePreferred

ಅಂತಿಮ ಓವರ್’ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 14 ರನ್’ಗಳ ಅವಶ್ಯಕತೆಯಿದ್ದವು. ಆದರೆ ಉಮೇಶ್ ಯಾದವ್ ಕೇವಲ 13 ರನ್’ಗಳನ್ನು ನೀಡುವ ಮೂಲಕ ಪಂದ್ಯ ರೋಚಕ ಟೈ ಆಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಕೊನೆಯ ಎಸೆತದಲ್ಲಿ ವಿಂಡೀಸ್ ಗೆಲ್ಲಲು 5 ರನ್’ಗಳ ಅವಶ್ಯಕತೆಯಿತ್ತು. ಶೈ ಹೋಪ್ ಬೌಂಡರಿ ಬಾರಿಸಿದರು. ಒಂದುವೇಳೆ ಅಂಬಟಿ ರಾಯುಡು ಆ ಬೌಂಡರಿ ತಡೆದಿದ್ದರೆ, ಟೀಂ ಇಂಡಿಯಾ ಗೆಲುವಿನ ನಗೆ ಬೀರುತ್ತಿತ್ತು.

ಈ ಲಿಂಕ್ ಕ್ಲಿಕ್ ಮಾಡಿ:ಹೀಗಿತ್ತು ಎಲ್ಲರೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಆ ಕೊನೆಯ ಓವರ್

ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿಯ ಅಜೇಯ 157 ರನ್’ಗಳ ನೆರವಿನಿಂದ 321 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಶೈ ಹೋಪ್ ಅಜೇಯ 123 ರನ್’ಗಳ ನೆರವಿನಿಂದ 321 ರನ್ ಗಳಿಸಿತು.