Asianet Suvarna News Asianet Suvarna News

ಕೊಹ್ಲಿ ಇಂಗ್ಲೆಂಡ್ ಕ್ಯಾಪ್ಟನ್ ರೂಟ್’ಗೆ ಥ್ಯಾಂಕ್ಸ್ ಹೇಳ್ಬೇಕು: ಗವಾಸ್ಕರ್

ಟಾಸ್ ಗೆದ್ದಿದ್ದ ರೂಟ್ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಬ್ಯಾಟಿಂಗ್ ಸ್ನೇಹಿ ಪಿಚ್’ನಲ್ಲಿ ವಿರಾಟ್ ಪಡೆ ಮೊದಲ ಇನ್ನಿಂಗ್ಸ್’ನಲ್ಲಿ 329 ರನ್ ಬಾರಿಸಿತ್ತು. ಆಬಳಿಕ ಎರಡನೇ ದಿನ ಮಳೆ ಬಂದಿದ್ದರಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್’ನಲ್ಲಿ ನೆಲಕಚ್ಚಿ ಆಡಲು ವಿಫಲವಾಯಿತು. ಪರಿಣಾಮ ಇಂಗ್ಲೆಂಡ್ ಕೇವಲ 161 ರನ್’ಗಳಿಗೆ ಸರ್ವಪತನ ಕಂಡು ನಿರಾಸೆ ಅನುಭವಿಸಿತು.

Ind Vs Eng Test Virat Kohli has to thank Joe Root for visitors commanding position says Sunil Gavaskar
Author
New Delhi, First Published Aug 21, 2018, 4:30 PM IST

ನವದೆಹಲಿ[ಆ.21]: ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್’ನಲ್ಲಿ ವಿರಾಟ್ ಕೊಹ್ಲಿ ಪಡೆ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದು, ಇದಕ್ಕೆ ಪರೋಕ್ಷವಾಗಿ ಕಾರಣಕರ್ತರಾದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್’ಗೆ ಧನ್ಯವಾದ ಹೇಳಬೇಕು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಟಾಸ್ ಗೆದ್ದಿದ್ದ ರೂಟ್ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಬ್ಯಾಟಿಂಗ್ ಸ್ನೇಹಿ ಪಿಚ್’ನಲ್ಲಿ ವಿರಾಟ್ ಪಡೆ ಮೊದಲ ಇನ್ನಿಂಗ್ಸ್’ನಲ್ಲಿ 329 ರನ್ ಬಾರಿಸಿತ್ತು. ಆಬಳಿಕ ಎರಡನೇ ದಿನ ಮಳೆ ಬಂದಿದ್ದರಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್’ನಲ್ಲಿ ನೆಲಕಚ್ಚಿ ಆಡಲು ವಿಫಲವಾಯಿತು. ಪರಿಣಾಮ ಇಂಗ್ಲೆಂಡ್ ಕೇವಲ 161 ರನ್’ಗಳಿಗೆ ಸರ್ವಪತನ ಕಂಡು ನಿರಾಸೆ ಅನುಭವಿಸಿತು. ಆ ಬಳಿಕ ಭಾರತ ಎರಡನೇ ಇನ್ನಿಂಗ್ಸ್’ನಲ್ಲಿ 352 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್’ಗೆ ಗೆಲ್ಲಲು 521 ರನ್’ಗಳ ಬೃಹತ್ ಟಾರ್ಗೆಟ್ ನೀಡಿದೆ. 

ಈಗಾಗಲೇ ಮೊದಲ ಎರಡು ಟೆಸ್ಟ್’ಗಳಲ್ಲಿ ಮುಖಭಂಗ ಅನುಭವಿಸಿರುವ ಭಾರತ ಮೂರನೇ ಟೆಸ್ಟ್’ನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಕೊನೆಗೂ ಮೂರನೇ ಟೆಸ್ಟ್’ನಲ್ಲಿ ಜವಾಬ್ದಾರಿಯುತವಾಗಿ ಆಲ್ರೌಂಡ್ ಆಟ ಪ್ರದರ್ಶಿಸಿದ ಭಾರತ ಮೂರು ದಿನವೂ ಆಂಗ್ಲರ ಮೇಲೆ ಬಿಗಿ ಹಿಡಿತ ಸಾಧಿಸಿದೆ. 

Follow Us:
Download App:
  • android
  • ios