ರನ್ ಗಳಿಕೆಯಲ್ಲಿ ಕೊಹ್ಲಿ ಹಿಂದಿಕ್ಕಿದ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್...!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 2:15 PM IST
Ind Vs Eng Test Jonny Bairstow Leaves Virat Kohli Behind In Race For Runs In 2018 Season
Highlights

ಜಾನಿ ಬೈರ್’ಸ್ಟೋ ಲಾರ್ಡ್ಸ್ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 7 ರನ್’ಗಳಿಂದ ಶತಕ ವಂಚಿತರಾದರು. ಆದರೂ ಇಂಗ್ಲೆಂಡ್ ತಂಡ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಲು ಅವರ ಬ್ಯಾಟಿಂಗ್ ಸಹಕಾರಿಯಾಗಿದೆ. ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಜಾನಿ ಬೈರ್’ಸ್ಟೋ ಇದೀಗ ಒಟ್ಟು 1482 ರನ್ ಬಾರಿಸಿದ್ದಾರೆ.

ಲಾರ್ಡ್ಸ್[ಆ.12]: 2018ನೇ ಸಾಲಿನಲ್ಲಿ ಮೂರೂ ಮಾದರಿಯ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಕಲೆಹಾಕಿದ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜಾನಿ ಬೈರ್’ಸ್ಟೋ ಪಾತ್ರರಾಗಿದ್ದಾರೆ. ಈ ಮೂಲಕ 2018ರ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಬಾರಿಸಿ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.

ಜಾನಿ ಬೈರ್’ಸ್ಟೋ ಲಾರ್ಡ್ಸ್ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 7 ರನ್’ಗಳಿಂದ ಶತಕ ವಂಚಿತರಾದರು. ಆದರೂ ಇಂಗ್ಲೆಂಡ್ ತಂಡ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಲು ಅವರ ಬ್ಯಾಟಿಂಗ್ ಸಹಕಾರಿಯಾಗಿದೆ. ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಜಾನಿ ಬೈರ್’ಸ್ಟೋ ಇದೀಗ ಒಟ್ಟು 1482 ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಈ ವರ್ಷ ಒಟ್ಟಾರೆಯಾಗಿ 1404 ರನ್ ಸಿಡಿಸಿದ್ದಾರೆ. ಇಂಗ್ಲೆಂಡ್ ಇನ್ನಿಂಗ್ಸ್ ಆರಂಭಿಸುವುದಕ್ಕೂ ಮುನ್ನ ಕೊಹ್ಲಿಗಿಂತ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್  1389 ರನ್ ಸಿಡಿಸಿದ್ದರು. ಕೊಹ್ಲಿಗಿಂತ ಬೈರ್’ಸ್ಟೋ ಕೇವಲ 15 ರನ್ ಹಿಂದಿದ್ದರು. 

ಮೊದಲ ಟೆಸ್ಟ್’ನಲ್ಲಿ 200 ರನ್[2 ಇನ್ನಿಂಗ್ಸ್ ಸೇರಿ] ಸಿಡಿಸಿದ್ದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್’ನಲ್ಲಿ ಮತ್ತೊಮ್ಮೆ ಉತ್ತಮ ಆಟವಾಡಿದರೇ ಜಾನಿ ಬೈರ್’ಸ್ಟೋ ದಾಖಲೆಯನ್ನು ಹಿಂದಿಕ್ಕಬಹುದು. ಕೊಹ್ಲಿ 2018ರಲ್ಲಿ ಒಟ್ಟು 21 ಪಂದ್ಯಗಳನ್ನಾಡಿ 66.85ರ ಸರಾಸರಿಯಲ್ಲಿ 1404 ರನ್ ಸಿಡಿಸಿದ್ದರೆ, ಜಾನಿ ಬೈರ್’ಸ್ಟೋ ಒಟ್ಟು 30 ಪಂದ್ಯಗಳನ್ನಾಡಿ 43.58ರ ಸರಾಸರಿಯಲ್ಲಿ 1482 ರನ್ ಸಿಡಿಸಿದ್ದಾರೆ.
ಇನ್ನು ಇಂಗ್ಲೆಂಡ್ ನಾಯಕ ಜೋ ರೂಟ್[1357], ಪಾಕಿಸ್ತಾನ ಫಖರ್ ಜಮಾನ್[1181] ಆನಂತರದ ಸ್ಥಾನದಲ್ಲಿದ್ದಾರೆ. 

ಇಲ್ಲಿದೆ ಕೊಹ್ಲಿ-ಜಾನಿ ಬೈರ್’ಸ್ಟೋ ಹೋಲಿಕೆ

ಟೆಸ್ಟ್ ಕ್ರಿಕೆಟ್

ಜಾನಿ ಬೈರ್’ಸ್ಟೋ- 7 ಪಂದ್ಯ - 445 ರನ್
ವಿರಾಟ್ ಕೊಹ್ಲಿ- 5 ಪಂದ್ಯ - 509 ರನ್

ಏಕದಿನ: 

ಜಾನಿ ಬೈರ್’ಸ್ಟೋ- 19 ಪಂದ್ಯ - 970 ರನ್
ವಿರಾಟ್ ಕೊಹ್ಲಿ- 9 ಪಂದ್ಯ - 749 ರನ್

ಟಿ20

ಜಾನಿ ಬೈರ್’ಸ್ಟೋ- 4 ಪಂದ್ಯ - 67 ರನ್
ವಿರಾಟ್ ಕೊಹ್ಲಿ- 7ಪಂದ್ಯ - 146 ರನ್ 

loader