ಓವಲ್’ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್’ನಲ್ಲಿ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ  ಅಲಿಸ್ಟರ್ ಕುಕ್ 147 ರನ್ ಗಳಿಸಿ ಔಟ್ ಆಗಿದ್ದಾರೆ. ಈ ಮೂಲಕ ಶತಕದೊಂದಿಗೆ ತಮ್ಮ ಟೆಸ್ಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಓವಲ್[ಸೆ.10]: ಆಲಿಸ್ಟರ್ ಕುಕ್ ಅಜೇಯ ಶತಕ ಹಾಗೂ ನಾಯಕ ಜೋ ರೂಟ್ ಅಮೋಘ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ನಾಲ್ಕನೇ ದಿನದಾಟದಲ್ಲಿ 395 ರನ್ ಗಳ ಭಾರೀ ಮುನ್ನಡೆ ಪಡೆದುಕೊಂಡಿದೆ.

Add Asianetnews Kannada as a Preferred SourcegooglePreferred

286 ಚೆಂಡುಗಳನ್ನು ಎದುರಿಸಿದ ಕುಕ್ 147 ರನ್ ಗಳಿಸಿ ತಮ್ಮ ವಿದಾಯವನ್ನು ಸ್ಮರಣೀಯವಾಗಿರಿಸಿಕೊಂಡರು. ಹನುಮಾ ವಿಹಾರಿ ಬೌಲಿಂಗ್ ನಲ್ಲಿ ಪಂತ್ ಗೆ ಕ್ಯಾಚ್ ನೀಡಿದ ಕುಕ್ 3 ರನ್ ಗಳಿಂದ 150 ರನ್ ಗಳಿಸುವ ಅವಕಾಶ ಕೈಚೆಲ್ಲಿಕೊಂಡರು.

ಟೆಸ್ಟ್ ವೃತ್ತಿ ಜೀವನದ 33ನೇ ಶತಕ ದಾಖಲಿಸಿದ ಇಂಗ್ಲೆಂಡ್ ಕಂಡ ಅದ್ಭುತ ಎಡಗೈ ದಾಂಡಿಗನ ಆಟ ಇನ್ನು ಮುಂದೆ ಅಭಿಮಾನಿಗಳಿಗೆ ಕಾಣಸಿಗದು. ಸಾಮಾಜಿಕ ತಾಣದಲ್ಲಿಯೂ ಕುಕ್ ಸಾಧನೆಯ ಗುಣಗಾನ ಆರಂಭವಾಗಿದೆ. ಎಲ್ಲ ಕ್ರಿಕೆಟ್ ಪ್ರೇಮಿಗಳಿಂದ ಅಲಿಸ್ಟರ್ ಕುಕ್ ಗೆ ಅಭಿನಂದನೆ ಮತ್ತು ಗುಡ್ ಲಕ್.