ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್’ನಲ್ಲಿ 31 ರನ್’ಗಳ ರೋಚಕ ಸೋಲು ಅನುಭವಿಸಿದೆ. ನಾಲ್ಕನೇ ದಿನ ಟೀಂ ಇಂಡಿಯಾ ಗೆಲ್ಲಲು ಕೇವಲ 84 ರನ್’ಗಳ ಅವಶ್ಯಕತೆಯಿತ್ತು. ಆದರೆ ಟೀಂ ಇಂಡಿಯಾದ ದಿಢೀರ್ ಕುಸಿತದಿಂದ ಭಾರತ ಅನಿರೀಕ್ಷಿತ ಸೋಲು ಕಂಡಿತು. ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣಗಳೇನು ಎಂದು ಪಟ್ಟಿ ಮಾಡುತ್ತಾ ಸಾಗಿದರೆ, ನಮಗೆ ಕಂಡಿದ್ದಿಷ್ಟು...

ಎಡ್ಜ್’ಬಾಸ್ಟನ್[ಆ.05]: ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್’ನಲ್ಲಿ 31 ರನ್’ಗಳ ರೋಚಕ ಸೋಲು ಅನುಭವಿಸಿದೆ. ನಾಲ್ಕನೇ ದಿನ ಟೀಂ ಇಂಡಿಯಾ ಗೆಲ್ಲಲು ಕೇವಲ 84 ರನ್’ಗಳ ಅವಶ್ಯಕತೆಯಿತ್ತು. ಆದರೆ ಟೀಂ ಇಂಡಿಯಾದ ದಿಢೀರ್ ಕುಸಿತದಿಂದ ಭಾರತ ಅನಿರೀಕ್ಷಿತ ಸೋಲು ಕಂಡಿತು. 

ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣಗಳೇನು ಎಂದು ಪಟ್ಟಿ ಮಾಡುತ್ತಾ ಸಾಗಿದರೆ, ನಮಗೆ ಕಂಡಿದ್ದಿಷ್ಟು...

* ಎರಡೂ ಇನ್ನಿಂಗ್ಸ್‌ನಲ್ಲಿ ಅಗ್ರ ಬ್ಯಾಟ್ಸ್‌ಮನ್‌ಗಳ ವೈಫಲ್ಯ

* ಸ್ಲಿಪ್‌ನಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲಿದ ಧವನ್, ರಹಾನೆ

* ವಿರಾಟ್ ಕೊಹ್ಲಿಯ ಮೇಲೆ ಅತಿಯಾದ ಅವಲಂಬನೆ

* 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಕೊನೆ 3 ವಿಕೆಟ್‌ಗೆ 93 ರನ್ ಗಳಿಸಿದ್ದು

* ಪಾಂಡ್ಯ ಮೇಲೆ ವಿಶ್ವಾಸವಿಟ್ಟು ಸ್ಟ್ರೈಕ್‌ನಿಂದ ದೂರ ಉಳಿದ ಕೊಹ್ಲಿ 

* ಇಶಾಂತ್‌ಗೂ ಮೊದಲು ಬ್ಯಾಟಿಂಗ್‌ಗಿಳಿದ ಶಮಿ 

ಅಂಕಿ-ಅಂಶ:

* 04 ಸೋಲು: ಟೀಂ ಇಂಡಿಯಾಗಿದು ನಾಲ್ಕನೇ ಕಡಿಮೆ ಅಂತರದ ಸೋಲು

* 11ನೇ ಬಾರಿ: ಟೆಸ್ಟ್‌ವೊಂದರಲ್ಲಿ ಕೊಹ್ಲಿ 200 ಅಥವಾ ಹೆಚ್ಚು ರನ್ ಗಳಿಸಿದ್ದು ಇದು 11ನೇ ಬಾರಿ

* 01 ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅತಿಕಿರಿಯ ಆಟಗಾರ ಕುರ್ರಾನ್