ಕಾರ್ಡಿಪ್[ಮೇ.28]: ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ದುಕೊಂಡಿದೆ. ಮೈದಾನ ಒದ್ದೆಯಾಗಿರುವುದರಿಂದ ಪಂದ್ಯ ತಡವಾಗಿ ಆರಂಭಗೊಳ್ಳಲಿದೆ.

ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಬಾಂಗ್ಲಾದೇಶ ಎದುರಿಸಲು ಸಜ್ಜಾಗಿದೆ. ಕೇದಾರ್ ಜಾಧವ್ ಸಂಪೂರ್ಣ ಫಿಟ್ ಆಗಿರದ ಹಿನ್ನಲೆಯಲ್ಲಿ ಈ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ವಿಜಯ್ ಶಂಕರ್ ಈಗ ತಂಡ ಕೂಡಿಕೊಂಡಿದ್ದಾರೆ.

ಇನ್ನು ಪಾಕಿಸ್ತಾನ ವಿರುದ್ಧ ಆಡಬೇಕಿದ್ದ ಮೊದಲ ಅಭ್ಯಾಸ ಪಂದ್ಯವು ರದ್ದಾಗಿದ್ದರಿಂದ ಬಾಂಗ್ಲಾದೇಶ ಇದೀಗ ಬಲಿಷ್ಠ ಟೀಂ ಇಂಡಿಯಾ ಸವಾಲು ಎದುರಿಸಲಿದೆ.