ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ಪಾಕಿಸ್ತಾನ ತಂಡಕ್ಕೆ ಶುಭಕೋರಿದ್ದಾರೆ.
ದುಬೈ(ನ.02): ಐಸಿಸಿ ಟಿ20 ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಇದೇ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದೆ.
ಶ್ರೀಲಂಕಾ ತಂಡವನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ 124 ಅಂಕಗಳೊಂದಿಗೆ ನಂ.1 ಸ್ಥಾನಕ್ಕೇರಿದೆ. ಇನ್ನು ಭಾರತ ವಿರುದ್ಧ ಬುಧವಾರ ದೆಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 53 ರನ್'ಗಳ ಸೋಲು ಅನುಭವಿಸಿದ ಕಾರಣ, ಶ್ರೇಯಾಂಕ ಪಟ್ಟಿಯಲ್ಲಿ ಒಂದು ಸ್ಥಾನ ಕುಸಿತ ಕಂಡು 2ನೇ ಸ್ಥಾನಕ್ಕಿಳಿಯಿತು.
ಸದ್ಯ ಪಾಕಿಸ್ತಾನ 124 ರೇಟಿಂಗ್ ಅಂಕಗಳನ್ನು ಪಡೆದಿದ್ದು ನ್ಯೂಜಿಲೆಂಡ್ 121 ಅಂಕ ಹೊಂದಿದೆ. ಆದರೆ 118 ಅಂಕಗಳನ್ನು ಹೊಂದಿರುವ ಭಾರತ 5ನೇ ಸ್ಥಾನದಲ್ಲಿದ್ದು, ಕಿವೀಸ್ ವಿರುದ್ಧ 3-0 ಅಂತರದಲ್ಲಿ ಸರಣಿ ಗೆದ್ದರೆ 2ನೇ ಸ್ಥಾನಕ್ಕೇರಲಿದೆ.
ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ಪಾಕಿಸ್ತಾನ ತಂಡಕ್ಕೆ ಶುಭಕೋರಿದ್ದಾರೆ.
