ಭಾರತೀಯ ಅಭಿಮಾನಿಯೊಬ್ಬ ತಮ್ಮನ್ನು ನಿಂದಿಸಿದ್ದಾಗಿ ಕ್ರೀಡಾಂಗಣದ ಭದ್ರತಾ ಸಿಬ್ಬಂದಿಗೆ ತಾಹಿರ್ ದೂರು ನೀಡಿದ ಬೆನ್ನಲ್ಲೇ ಆತನನ್ನು ಮೈದಾನದಿಂದ ಹೊರದಬ್ಬಲಾಯಿತು ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತಿಳಿಸಿದೆ.

ಜೋಹಾನ್ಸ್‌ಬರ್ಗ್(ಫೆ.13): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 4ನೇ ಏಕದಿನ ಪಂದ್ಯದ ವೇಳೆ ದ.ಆಫ್ರಿಕಾದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್, ಜನಾಂಗೀಯ ನಿಂದನೆಗೆ ಗುರಿಯಾದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರೀತಿಯಿಂದ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ನಾನೊಬ್ಬ ಸಾಮಾನ್ಯ ಮನುಷ್ಯನಾಗಿದ್ದು, ದೇಶ, ಧರ್ಮ, ಬಣ್ಣ ಮೀರಿ ಪ್ರೀತಿಸುತ್ತೇನೆ. ನಾನು ಜಗತ್ತಿನ ನಾನಾ ಕಡೆ ಕ್ರಿಕೆಟ್ ಆಡಿದ್ದೇನೆ ಹಾಗೂ ಪ್ರೀತಿಯಿಂದ ಸ್ನೇಹಿತರನ್ನು ಸಂಪಾದಿಸಿದ್ದೇನೆಂದು ಟ್ವೀಟ್ ಮಾಡುವ ಮೂಲಕ ಮೌನ ಮುರಿದಿದ್ದಾರೆ.

Scroll to load tweet…

ಭಾರತೀಯ ಅಭಿಮಾನಿಯೊಬ್ಬ ತಮ್ಮನ್ನು ನಿಂದಿಸಿದ್ದಾಗಿ ಕ್ರೀಡಾಂಗಣದ ಭದ್ರತಾ ಸಿಬ್ಬಂದಿಗೆ ತಾಹಿರ್ ದೂರು ನೀಡಿದ ಬೆನ್ನಲ್ಲೇ ಆತನನ್ನು ಮೈದಾನದಿಂದ ಹೊರದಬ್ಬಲಾಯಿತು ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತಿಳಿಸಿದೆ.

ಐಸಿಸಿ ನಿಯಮದ ಪ್ರಕಾರ, ಪ್ರೇಕ್ಷಕರು ಯಾವುದೇ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ನಡೆಸುವಂತಿಲ್ಲ. ತಾಹಿರ್‌ರನ್ನು ನಿಂದಿಸುತ್ತಿರುವ ವಿಡಿಯೋ, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.