ಉತ್ತಮ ಕೋಚ್ ಆಗಲು ಕೇವಲ ಆಕರ್ಷಕ ನಿರೂಪಣೆಯೊಂದಿದ್ದರಷ್ಟೇ ಸಾಲದು. ಕೋಚ್ ಆದವನಿಗೆ ತಂಡದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಕಲೆಯೂ ಗೊತ್ತಿರಬೇಕು ಎಂದು ದಾದಾ ಕಿವಿಮಾತು ಹೇಳಿದ್ದಾರೆ.
ಕೋಲ್ಕತಾ(ಜು.01): ಆಟಗಾರರ ನಿರ್ವಹಣೆಯಲ್ಲಿ ಭಾರತ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ವಿಫಲಗೊಂಡಿದ್ದರು ಎಂದು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಸುಳಿವು ನೀಡಿದ್ದಾರೆ.
'ಸಾಕಷ್ಟು ಕ್ರಿಕೆಟ್ ಅನುಭವವಿರುವ ಅನಿಲ್ ಕುಂಬ್ಳೆ ಆಟಗಾರರನ್ನು ಸೂಕ್ತವಾಗಿ ನಿಭಾಯಿಸುತ್ತಾರೆ ಎನ್ನುವ ವಿಶ್ವಾಸದೊಂದಿಗೆ ಅವರನ್ನು ನೇಮಕ ಮಾಡಲಾಗಿತ್ತು' ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ನಿರೀಕ್ಷೆಯನ್ನು ಕುಂಬ್ಳೆ ಉಳಿಸಿಕೊಳ್ಳಲಿಲ್ಲ ಎಂಉ ಪರೋಕ್ಷವಾಗಿ ಹೇಳಿದ್ದಾರೆ.
ಉತ್ತಮ ಕೋಚ್ ಆಗಲು ಕೇವಲ ಆಕರ್ಷಕ ನಿರೂಪಣೆಯೊಂದಿದ್ದರಷ್ಟೇ ಸಾಲದು. ಕೋಚ್ ಆದವನಿಗೆ ತಂಡದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಕಲೆಯೂ ಗೊತ್ತಿರಬೇಕು ಎಂದು ದಾದಾ ಕಿವಿಮಾತು ಹೇಳಿದ್ದಾರೆ.