ಬಿಸಿಸಿಐನಿಂದ 6 ತಿಂಗಳಲ್ಲಿ 102 ಆಟಗಾರರ ಆಯ್ಕೆ

First Published 1, Aug 2018, 4:13 PM IST
Impatient Indian selectors have picked 102 players in the last 6 months
Highlights

ಟೀಂ ಇಂಡಿಯಾ ಆಯ್ಕೆ ಸಮಿತಿ ಹಲವು ಬಾರಿ ಚರ್ಚೆಗೆ ಒಳಗಾಗಿದೆ. ಇದೀಗ ಸೆಲೆಕ್ಷನ್ ಕಮಿಟಿಗೆ ಹೊಸ ತಲೆನೋವು ಶುರುವಾಗಿದೆ. ಕಳೆದ 6 ತಿಂಗಳಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಎಡವಟ್ಟು ಮಾಡಿತಾ ಅನ್ನೋ ಪ್ರಶ್ನೆ ಎದ್ದಿದೆ. ಅಷ್ಟಕ್ಕೂ ವಿವಾದ ಏನು?

ಮುಂಬೈ(ಆ.01): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನ ಆಯ್ಕೆ ಮಾಡಿದ ಬಿಸಿಸಿಐ ಸೆಲೆಕ್ಷನ್ ಕಮಿಟಿ ಸದ್ಯ ನಿರಾಳವಾಗಿದೆ. ಆದರೆ ಟೀಂ ಇಂಡಿಯಾ ಆಯ್ಕೆ ಸಮಿತಿಯ ಆಯ್ಕೆ ಪ್ರಕ್ರಿಯೆ ಇದೀಗ ಚರ್ಚೆಗೆ ಗ್ರಾಸವಾಗಿದೆ. 

ಕಳೆದ 6 ತಿಂಗಳಲ್ಲಿ ಆಯ್ಕೆ ಸಮಿತಿ ಬರೋಬ್ಬರಿ 102 ಆಟಗಾರರನ್ನ ಆಯ್ಕೆ ಮಾಡಿದೆ. ಇದು 13 ತಂಡಗಳಿಗೆ ಸಮನಾಗಿದೆ. ಕಡಿಮೆ ಅವಧಿಯಲ್ಲಿ ಇಷ್ಟು ಆಟಗಾರರನ್ನ ಬದಲಾಯಿಸಿದ್ದೇಕೆ ಅನ್ನೋ ಪ್ರಶ್ನೆ ಎದ್ದಿದೆ.

ತಂಡಕ್ಕೆ ಆಯ್ಕೆಯಾಗೋ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ ಅನ್ನೋ ಕೂಗು ಕೇಳಿಬಂದಿದೆ. ಇಷ್ಟೇ ಅಲ್ಲ ಹೆಚ್ಚು ಹೆಚ್ಚು ಆಟಗಾರರ ಆಯ್ಕೆಯಿಂದ ಬಿಸಿಸಿಐ ವಾರ್ಷಿಕ ಒಪ್ಪಂದಕ್ಕೂ ಸಮಸ್ಯೆ ಎದುರಾಗುತ್ತಿದೆ.

ಆಯ್ಕೆ ಸಮಿತಿ ತಾಳ್ಮೆಯಿಂದ ಆಟಗಾರರನ್ನ ಆಯ್ಕೆ ಮಾಡುತ್ತಿಲ್ಲ. ಒಂದು ಪಂದ್ಯ ಅಥವಾ ಸರಣಿ ಬಳಿಕ ಹೊಸ ಆಟಗಾರರತ್ತ ಆಯ್ಕೆ ಸಮಿತಿ ಮುಖಮಾಡುತ್ತಿದೆ. ಇದು ಆಟಗಾರರ ಮೇಲೂ ಪರಿಣಾಮ ಬೀರುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ.

loader