ಅಬುಧಾಬಿ(ಸೆ.28): ಯುವವೇಗಿಇಮಾದ್ ವಾಸೀಂ (21ಕ್ಕೆ 3) ಅವರಮಾರಕದಾಳಿಗೆತತ್ತರಿಸಿದಪಾಕಿಸ್ತಾನತಂಡ, 3 ಪಂದ್ಯಗಳಟಿ20 ಸರಣಿಯಅಂತಿಮಪಂದ್ಯದಲ್ಲಿವೆಸ್ಟ್‌ಇಂಡೀಸ್ ಎದುರು 8 ವಿಕೆಟ್‌ಗಳಅಂತರದಲ್ಲಿಗೆಲುವುಸಾಧಿಸಿತಲ್ಲದೆ, ಇದರೊಂದಿಗೆಸರ್ಫರಾಜ್ ಅಹ್ಮದ್ ನಾಯಕತ್ವದಪಾಕಿಸ್ತಾನ 3-0ಯಿಂದಸರಣಿಯನ್ನುಕ್ಲೀನ್‌ಸ್ವೀಪ್ ಮಾಡಿತು.
ಇಲ್ಲಿನಶೇಕ್ ಜಾಯೆದ್ ಕ್ರೀಡಾಂಗಣದಲ್ಲಿನಡೆದಪಂದ್ಯದಲ್ಲಿಟಾಸ್ ಸೋತರೂಮೊದಲುಬ್ಯಾಟಿಂಗ್ ಮಾಡಿದವೆಸ್ಟ್‌ಇಂಡೀಸ್ ತಂಡ, ನಿಗದಿತಓವರ್‌ಗಳಲ್ಲಿ 5 ವಿಕೆಟ್‌ಗೆ 103 ರನ್ ಗಳಿಸಿತು. ನಂತರಬ್ಯಾಟಿಂಗ್ ಮಾಡಿದಪಾಕಿಸ್ತಾನ 15.1 ಓವರ್‌ಗಳಲ್ಲಿ 2 ವಿಕೆಟ್‌ಗೆ 108 ರನ್ ಗಳಿಸಿತು.
ಸಾಧಾರಣಮೊತ್ತಬೆನ್ನಟ್ಟಿದಪಾಕಿಸ್ತಾನತಂಡಆರಂಭದಲ್ಲಿತಡಬಡಾಯಿಸಿತು. ಆದರೆನಂತರಮುರಿಯದ 3ನೇವಿಕೆಟ್‌ಗೆಜೊತೆಯಾದಶೋಯೆಬ್ ಮಲಿಕ್ (43) ಮತ್ತುಬಾಬರ್ ಅಜಮ್ (27) ರನ್ ಗಳಿಸಿತಂಡಕ್ಕೆಸುಲಭಜಯತಂದುಕೊಟ್ಟರು.
ಇದಕ್ಕೂಮುನ್ನಬ್ಯಾಟಿಂಗ್ ಮಾಡಿದವಿಂಡೀಸ್ ತಂಡಆರಂಭದಲ್ಲಿಬೇಗನೇವಿಕೆಟ್ ಕಳೆದುಕೊಂಡುಸಂಕಷ್ಟಕ್ಕೆಸಿಲುಕಿತು. ಮಧ್ಯಮಕ್ರಮಾಂಕದಲ್ಲಿಮರ್ಲಾನ್ ಸ್ಯಾಮುಯೆಲ್ಸ್ (ಅಜೇಯ 42) ಒಬ್ಬರನ್ನುಬಿಟ್ಟರೆಮಿಕ್ಕವರಿಂದಪ್ರಬಲಆಟವ್ಯಕ್ತವಾಗಲಿಲ್ಲ. ಆರಂಭಿಕಚಾರ್ಲ್ಸ್ (5), ಫ್ಲೇಚರ್ (9), ವಾಲ್ಟನ್ (0), ಡ್ವೇನ್ ಬ್ರಾವೋ (11), ಪೂರನ್ (16) ಹಾಗೂಪೊಲಾರ್ಡ್ 16 ರನ್‌ಗಳಿಗೆನಿರುತ್ತರರಾದರು. ಪಾಕ್ ಪರವಾಸೀಂ 3, ಮೊಹ್ಮದ್ ನವಾಜ್ 1 ವಿಕೆಟ್ ಪಡೆದರು.
ಸಂಕ್ಷಿಪ್ತಸ್ಕೋರ್
ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 103
(ಸ್ಯಾಮುಯೆಲ್ಸ್ ಅಜೇಯ 42, ಪೂರನ್ 16, ವಾಸೀಂ 21ಕ್ಕೆ 3)
ಪಾಕಿಸ್ತಾನ: 15.1 ಓವರ್‌ಗಳಲ್ಲಿ 2 ವಿಕೆಟ್‌ಗೆ 108
(ಮಲಿಕ್ 43*, ಬಾಬರ್ 27*, ಕೆಸ್ರಿಕ್ 15ಕ್ಕೆ 2)
ಫಲಿತಾಂಶ: ಪಾಕಿಸ್ತಾನಕ್ಕೆ 8 ವಿಕೆಟ್ ಗೆಲುವು
ಪಂದ್ಯಶ್ರೇಷ್ಠ:ಇಮಾದ್ ವಾಸೀಂ
