ಸಾಧ್ಯವಾದಷ್ಟು ಬೇಗ ಸ್ಪಿನ್ ಎದುರಿಸುವುದನ್ನು ಕಲಿಯಿರಿ. ಸ್ಪಿನ್ ಎದುರಿಸಲು ಸಾಧ್ಯವಿಲ್ಲವೆಂದರೆ ಭಾರತ ಪ್ರವಾಸ ಕೈಗೊಳ್ಳುವುದೇ ಬೇಡ ಎಂದು ಆಸ್ಟ್ರೇಲಿಯಾದ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಪಿ ತಿಳಿಸಿದ್ದಾರೆ.
ನವದೆಹಲಿ(ಫೆ.03): ಉಪಖಂಡದಲ್ಲಿ ಆಡಲಿಳಿಯುವ ಮುನ್ನ ಆದಷ್ಟು ಬೇಗ ಸ್ಪಿನ್ನರ್'ಗಳನ್ನು ಎದುರಿಸಲು ಕಲಿಯಿರಿ. ಇಲ್ಲವಾದರೆ ಮುಖಭಂಗ ಅನುಭವಿಸುವುದು ಗ್ಯಾರಂಟಿ ಎಂದು ಆಸೀಸ್ ತಂಡಕ್ಕೆ ಇಂಗ್ಲೆಂಡ್'ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್'ಸನ್ ಎಚ್ಚರಿಕೆಯ ಕಿವಿಮಾತುಗಳನ್ನಾಡಿದ್ದಾರೆ.
ಸಾಧ್ಯವಾದಷ್ಟು ಬೇಗ ಸ್ಪಿನ್ ಎದುರಿಸುವುದನ್ನು ಕಲಿಯಿರಿ. ಸ್ಪಿನ್ ಎದುರಿಸಲು ಸಾಧ್ಯವಿಲ್ಲವೆಂದರೆ ಭಾರತ ಪ್ರವಾಸ ಕೈಗೊಳ್ಳುವುದೇ ಬೇಡ ಎಂದು ಆಸ್ಟ್ರೇಲಿಯಾದ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಪಿ ತಿಳಿಸಿದ್ದಾರೆ.
ನೀವು ಭಾರತಕ್ಕೆ ಹೋದ ತಕ್ಷಣ ಅಲ್ಲಿನ ಪಿಚ್'ನಲ್ಲಿ ಸ್ಪಿನ್ ಎದುರಿಸಲು ಅಭ್ಯಾಸ ಮಾಡಿ. ಅಲ್ಲಿ ಅಭ್ಯಾಸ ನಡೆಸಿದರೆ ಯಾವ ಪಿಚ್'ನಲ್ಲಿ ಬೇಕಾದರೂ ಆತ್ಮವಿಶ್ವಾಸದಿಂದ ಚೆಂಡನ್ನು ಎದುರಿಸಲು ಸಾಧ್ಯವೆಂದಿದ್ದಾರೆ.
ಆಸ್ಟ್ರೇಲಿಯಾ ತಂಡವು ಸಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಇದೇ ತಿಂಗಳು 23ರಿಂದ ಪುಣೆಯಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ನಂತರ ಬೆಂಗಳೂರು, ರಾಂಚಿ ಹಾಗೂ ಧರ್ಮಶಾಲದಲ್ಲಿಯೂ ಟೆಸ್ಟ್ ಪಂದ್ಯಗಳು ನಡೆಯಲಿವೆ.