ಇಂಡೋ-ಆಂಗ್ಲೋ ಟೆಸ್ಟ್ ಸರಣಿಗೂ ಮುನ್ನ ರ‍್ಯಾಂಕಿಂಗ್ ಪ್ರಕಟ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Jul 2018, 5:58 PM IST
ICC Test rankings ahead of the India-England series
Highlights

ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳಲ್ಲೇ ಮುಂದುವರೆದಿದ್ದರೆ, ಶ್ರೀಲಂಕಾದ ದೀಮುತ್ ಕರುಣಾರತ್ನೆ ಏಳನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ದುಬೈ[ಜು.24]: ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳಲ್ಲೇ ಮುಂದುವರೆದಿದ್ದರೆ, ಶ್ರೀಲಂಕಾದ ದೀಮುತ್ ಕರುಣಾರತ್ನೆ ಏಳನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್’ನ ಜೇಮ್ಸ್ ಆ್ಯಂಡರ್’ಸನ್, ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ಹಾಗೂ ಭಾರತದ ರವೀಂದ್ರ ಜಡೇಜಾ ಮೊದಲ ಮೂರು ಸ್ಥಾನಗಳಲ್ಲಿ ಭದ್ರವಾಗಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಆಗಸ್ಟ್ 01ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ನಂ.1 ಸ್ಥಾನಕ್ಕೆ ಲಗ್ಗೆಯಿಡಬಹುದಾಗಿದೆ. ಕಳೆದೊಂದು ವರ್ಷದಿಂದ ಕ್ರಿಕೆಟ್ ನಿಷೇಧಕ್ಕೆ ಗುರಿಯಾಗಿರುವ ಸ್ಟೀವ್ ಸ್ಮಿತ್ ನಂ.1 ಸ್ಥಾನದಲ್ಲೇ ಮುಂದುರೆದಿದ್ದಾರೆ. ಕೊಹ್ಲಿ ಆಸೀಸ್ ಕ್ರಿಕೆಟಿಗ ಸ್ಮಿತ್’ಗಿಂತ 25 ಅಂಕ ಹಿಂದಿದ್ದಾರೆ. ಒಂದುವೇಳೆ ಕೊಹ್ಲಿ ಉತ್ತಮ ಪ್ರದರ್ಶನ ತೋರಿದರೆ ನಂ.1 ಸ್ಥಾನಕ್ಕೇರಲು ಸುವರ್ಣಾವಕಾಶವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದ ಲಂಕಾದ ಕೆಲ ಆಟಗಾರರು ಶ್ರೇಯಾಂಕದಲ್ಲಿ ಭಡ್ತಿ ಪಡೆದಿದ್ದಾರೆ. ಕರುಣಾರತ್ನೆ ಜತೆಗೆ ದಿನೇಶ್ ಚಾಂಡಿಮಲ್ ಕೂಡ ಒಂದು ಸ್ಥಾನ ಮೇಲೇರಿದ್ದು, ಎಂಟನೇ ಸ್ಥಾನಕ್ಕೇರಿದ್ದಾರೆ. ಇನ್ನು ಮಾರ್ಕ್’ರಮ್ ಹಾಗೂ ಡೀನ್ ಎಲ್ಗಾರ್ ಕ್ರಮವಾಗಿ 9 ಹಾಗೂ 10ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್’ಬೈ ಹೇಳುವುದಾಗಿ ಘೋಷಿಸಿರುವ ಲಂಕಾದ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ಎಂಟನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ.  

ಬ್ಯಾಟ್ಸ್’ಮನ್’ಗಳ ಟಾಪ್ 10 ಪಟ್ಟಿ ಹೀಗಿದೆ:

1. ಸ್ಟೀವ್ ಸ್ಮಿತ್
2. ವಿರಾಟ್ ಕೊಹ್ಲಿ
3. ಜೋ ರೂಟ್
4. ಕೇನ್ ವಿಲಿಯಮ್ಸನ್
5. ಡೇವಿಡ್ ವಾರ್ನರ್
6. ಚೇತೇಶ್ವರ ಪೂಜಾರ
7. ದೀಮುತ್ ಕರುಣಾರತ್ನೆ
8. ದಿನೇಶ್ ಚಾಂಡಿಮಲ್
9. ಡೀನ್ ಎಲ್ಗಾರ್
10. ಏಡನ್ ಮಾರ್ಕ್’ರಮ್

ಬೌಲರ್’ಗಳ ಟಾಪ್ 10 ಪಟ್ಟಿ ಹೀಗಿದೆ

1. ಜೇಮ್ಸ್ ಆ್ಯಂಡರ್’ಸನ್
2. ಕಗಿಸೋ ರಬಾಡ
3. ರವೀಂದ್ರ ಜಡೇಜಾ
4. ವೆರ್ನಾನ್ ಫಿಲಾಂಡರ್
5. ರವಿಚಂದ್ರನ್ ಅಶ್ವಿನ್
6. ಪ್ಯಾಟ್ ಕಮ್ಮಿನ್ಸ್
7. ಟ್ರೆಂಟ್ ಬೌಲ್ಟ್
8. ರಂಗನಾ ಹೆರಾತ್
9. ನೇಲ್ ವ್ಯಾಗ್ನರ್
10. ಜೋಸ್ ಹ್ಯಾಜಲ್’ವುಡ್

loader