Asianet Suvarna News Asianet Suvarna News

ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ-ಪೃಥ್ವಿ ಶಾ,ರಿಷಬ್ ಪಂತ್‌ಗೆ ಬಡ್ತಿ!

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ ಪ್ರಕಟಗೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಇದರ ಜೊತೆಗೆ ರಿಷಬ್ ಪಂತ್, ಪೃಥ್ವಿ ಶಾ ಹಾಗೂ ಉಮೇಶ್ ಯಾದವ್ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ.

ICC test ranking Prithvi shaw and Rishab pant make gains virat kohli continued top position
Author
Bengaluru, First Published Oct 15, 2018, 5:32 PM IST

ದುಬೈ(ಅ.15): ಭಾರತ ಹಾಗೂ ವೆಸ್ಟ್ಇಂಡೀಸ್ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ನೂತನ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನದಲ್ಲಿ ಮುಂದುವರಿದಿದ್ದಾರೆ.

ವಿಂಡೀಸ್ ಸರಣಿಯಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೃಥ್ವಿ ಶಾ ಹಾಗೂ ರಿಷಬ್ ಪಂತ್  ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. ಶತಕದ ಬಳಿಕ 70ನೇ ಸ್ಥಾನದಲ್ಲಿದ್ದ ಪೃಥ್ವಿ ಶಾ ಇದೀಗ 60ನೇ ಸ್ಥಾನಕ್ಕೇ ಜಿಗಿದಿದ್ದಾರೆ.

ರಿಷಬ್ ಪಂತ್ 92 ರನ್ ಸ್ಫೋಟಕ  ಬ್ಯಾಟಿಂಗ್‌ನಿಂದ 23 ಸ್ಥಾನ ಜಿಗಿದು ಇದೀಗ 62ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಅಜಿಂಕ್ಯ ರಹಾನೆ 18ನೇ ಸ್ಥಾನ ಪಡೆದಿದ್ದಾರೆ. ಇನ್ನು ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ ಉಮೇಶ್ ಯಾದವ್ ಬೌಲಿಂಗ್ ವಿಭಾಗದಲ್ಲಿ 25ನೇ ಸ್ಥಾನ ಅಲಂಕರಿಸಿದ್ದಾರೆ.

ಟೆಸ್ಟ್ ತಂಡಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. 116 ಅಂಕ ಪಡೆದಿರುವ ಭಾರತ ಮೊದಲ ಸ್ಥಾನದಲ್ಲಿದ್ದರೆ, 106 ಅಂಕಗಳೊಂದಿಗೆ ಸೌತ್ಆಫ್ರಿಕಾ 2ನೇ ಸ್ಥಾನದಲ್ಲಿದೆ. ಇನ್ನೂ ಆಸ್ಟ್ರೇಲಿಯಾ 106 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 105 ಅಂಕ ಪಡೆದಿರುವ ಇಂಗ್ಲೆಂಡ್ 4 ಹಾಗೂ 102 ಅಂಕ ಪಡೆದಿರುವ ನ್ಯೂಜಿಲೆಂಡ್ 5ನೇ ಸ್ಥಾನದಲ್ಲಿದೆ.
 

Follow Us:
Download App:
  • android
  • ios