ದುಬೈ[ಮಾ.13]: ಆಸ್ಪ್ರೇಲಿಯಾ ವಿರುದ್ಧ 2 ಟಿ20 ಪಂದ್ಯಗಳಲ್ಲಿ ಆಕರ್ಷಕ ಪ್ರದರ್ಶನ ತೋರಿದ ಭಾರತದ ಕೆ.ಎಲ್‌.ರಾಹುಲ್‌, ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 1 ಸ್ಥಾನ ಏರಿಕೆ ಕಂಡು 5ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಬೌಲರ್‌ಗಳ ಪಟ್ಟಿಯಲ್ಲಿ ಕುಲ್ದೀಪ್‌ ಯಾದವ್‌ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. 

ಇಂಡೋ-ಆಸಿಸ್ ಫೈನಲ್ ಫೈಟ್: ಡೆಲ್ಲಿಯಲ್ಲಿ ಗೆಲ್ಲೋರ‍್ಯಾರು..?

ಆಸೀಸ್‌ ವಿರುದ್ಧ ಟಿ20 ಸರಣಿಗೆ ಕುಲ್ದೀಪ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇದೇ ವೇಳೆ ತಂಡಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ (122) 2ನೇ ಸ್ಥಾನದಲ್ಲಿ ಮುಂದುವರಿದಿದೆ. ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನಕ್ಕಿಂತ 13 ಅಂಕ ಹಿಂದಿದೆ. ಇನ್ನು ಇಂಗ್ಲೆಂಡ್ ಮೂರನೇ ಸ್ಥಾನದಲ್ಲೇ ಮುಂದುವರೆದಿದೆ.

ಬ್ಯಾಟಿಂಗ್’ನಲ್ಲಿ ಪಾಕಿಸ್ತಾನದ ಬಾಬರ್ ಅಜಂ ಹಾಗೂ ಬೌಲಿಂಗ್’ನಲ್ಲಿ ಆಫ್ಘಾನಿಸ್ತಾನದ ಲೆಗ್’ಸ್ಪಿನ್ನರ್ ರಶೀರ್ ಖಾನ್ ಕ್ರಮವಾಗಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಆಲ್ರೌಂಡರ್ ವಿಭಾಗದಲ್ಲಿ ಗ್ಲೇನ್ ಮ್ಯಾಕ್ಸ್’ವೆಲ್ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.