ಗಲ್ಲಿ ಕ್ರಿಕೆಟ್ ಗೆ ಐಸಿಸಿ ಸೆಟ್ ಮಾಡಿದ ನಿಯಮ ಏನು?

ICC set rules for Gully cricket
Highlights

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೇವಲ ವಿಶ್ವದರ್ಜೆಯ ಕ್ರಿಕೆಟ್ ಗಷ್ಟೇ ಸೀಮಿತ ಎಂದು ಭಾವಿಸಿದ್ದೀರಾ?. ಐಸಿಸಿ ಗಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದಂತೆ ನೀಡಿದ ತೀರ್ಪು ನಿಮ್ಮನ್ನು ಖಂಡಿತ ಅಚ್ಚರಿಗೆ ದೂಡುತ್ತದೆ. ಹೌದು ಐಸಿಸಿ ಗಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದಂತೆ ತೀರ್ಪೊಂದನ್ನು ನೀಡಿದೆ.

ಬೆಂಗಳೂರು (ಮೇ. 23) ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೇವಲ ವಿಶ್ವದರ್ಜೆಯ ಕ್ರಿಕೆಟ್ ಗಷ್ಟೇ ಸೀಮಿತ ಎಂದು ಭಾವಿಸಿದ್ದೀರಾ?. ಐಸಿಸಿ ಗಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದಂತೆ ನೀಡಿದ ತೀರ್ಪು ನಿಮ್ಮನ್ನು ಖಂಡಿತ ಅಚ್ಚರಿಗೆ ದೂಡುತ್ತದೆ. ಹೌದು ಐಸಿಸಿ ಗಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದಂತೆ ತೀರ್ಪೊಂದನ್ನು ನೀಡಿದೆ.

ಬ್ಯಾಟ್ಸಮನ್ ಓರ್ವ ಔಟಾದ ಬಗೆ ಪ್ರಶ್ನಿಸಿ ಕ್ರಿಕೆಟ್ ಫ್ಯಾನ್ ಓರ್ವ ಐಸಿಸಿ ಅ.ಧಿಕೃತ ಟ್ವಿಟರ್ ಅಕೌಂಟ್ ಗೆ ವಿಡಿಯೋ ಅಪ್ಲೋಡ್ ಮಾಡಿ ಸಲಹೆ ಕೇಳಿದ್ದ. ವಿಡಿಯೋ ಗಮನಿಸಿರುವ ಐಸಿಸಿ, ಬ್ಯಾಟ್ಸಮನ್ ಔಟ್ ಆಗಿದ್ದಾನೆ ಎಂದು ತೀರ್ಪು ನೀಡಿದೆ. ಐಸಿಸಿ ನಿಯಾಮಾವಳಿ 32.1ರ ಪ್ರಕಾರ ಬ್ಯಾಟ್ಸ್ ಮನ್ ಬಾರಿಸಿದ ಚೆಂಡು ವಿಕೆಟ್ ಗೆ ತಾಗಿದರೆ ಅದು ಔಟ್ ಎಂದು ಸ್ಪಷ್ಟಪಡಿಸಿದೆ.

ಹಮ್ಜಾ ಎಂಬ ವ್ಯಕ್ತಿ ಈ ಗಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದ ವಿಡಿಯೋ ಅಪ್ಲೋಡ್ ಮಾಡಿದ್ದು, ಐಸಿಸಿ ಅದಕ್ಕೆ ಪ್ರತ್ಯುತ್ತರ ನೀಡಿರುವುದಕ್ಕೆ ಎಲ್ಲಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

loader