ಲಂಡನ್(ಜು.29): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಏಕದಿನ ಚಾಂಪಿಯನ್ಸ್ ಟ್ರೋಫಿ ರೀತಿಯಲ್ಲೇ ಇದೀಗ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ನಡೆಯಲಿದೆ. ಟೆಸ್ಟ್ ಮಾದರಿ ಆಗಿರುವ ಕಾರಣ, ಟೂರ್ನಿ, ವೇಳಾಪಟ್ಟಿ ಎಲ್ಲವೂ ಕೊಂಚ ಭಿನ್ನವಾಗಿದೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದೊಂದಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಆರಂಭಗೊಳ್ಳುತ್ತಿದೆ. ಆಗಸ್ಟ್‌ನಲ್ಲಿ ಆರಂಭಗೊಳ್ಳುತ್ತಿರುವ ಈ ಸರಣಿ ಜೂನ್ 2021ರ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಲಿದೆ.

 

ಇತಿಹಾಸ:
ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ 2010ರಲ್ಲೇ ಚರ್ಚೆಯಾಗಿತ್ತು. 2013ರ ಚಾಂಪಿಯನ್ಸ್ ಟ್ರೋಫಿ ರದ್ದು ಮಾಡಿ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಆಡಿಸಲು ಐಸಿಸಿ ನಿರ್ಧರಿಸಿತ್ತು. ಆದರೆ ಹಲವು ಕಾರಣಗಳಿಂದ 2017ಕ್ಕೆ ಮಂದೂಡಲಾಯಿತು. ಬಳಿಕ 2019ರಿಂದ 2021ರ ವರೆಗೆ ನಡೆಸಲು ನಿರ್ಧರಿಸಲಾಯಿತು.

ಇದನ್ನೂ ಓದಿ: ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟ

ಪಾಲ್ಗೊಳ್ಳುವ ತಂಡಗಳು:
ರ್ಯಾಕಿಂಗ್ ಪ್ರಕಾರ ಟಾಪ್ 9 ತಂಡಗಳು ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. ಭಾರತ, ನ್ಯೂಜಿಲೆಂಡ್, ಸೌತ್ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್  ಹಾಗೂ ಬಾಂಗ್ಲಾದೇಶ  ತಂಡಗಳು ಪಾಲ್ಗೊಳ್ಳುತ್ತಿವೆ.

ಟೂರ್ನಿ ಮಾದರಿ
9 ತಂಡಗಳು 6 ಎದುರಾಳಿ ವಿರುದ್ಧ ಪಂದ್ಯ ಆಡಲಿದೆ. 3 ತವರಿನ ಸರಣಿ ಹಾಗೂ 3 ತವರಿನಿಂದಾಚೆಗಿನ ಸರಣಿ. ಪ್ರತಿ ಸರಣಿ 5 ಅಥವಾ 2 ಪಂದ್ಯ ಒಳಗೊಂಡಿರುತ್ತೆ. ಒಟ್ಟು 27 ಟೆಸ್ಟ್ ಸರಣಿ ಹಾಗೂ 71 ಪಂದ್ಯಗಳು ನಡೆಯಲಿವೆ. ಗರಿಷ್ಠ ಅಂಕ ಪಡೆದ  2 ತಂಡಗಳು ಲಾರ್ಡ್ಸ್ ಮೈದಾನದಲ್ಲಿ 2021ರ ಜೂನ್‌‌ನಲ್ಲಿ ಫೈನಲ್ ಪಂದ್ಯ ಆಡಲಿದೆ.

ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ;