‘‘ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸಿಂಗಪುರದಲ್ಲಿ ನಡೆದಿದ್ದ ಐಸಿಸಿ ಕಾರ್ಯಕಾರಿ ಸಮಿತಿ ಸಭೆಗೆ ನನ್ನನ್ನು ಆಹ್ವಾನಿಸದ ಐಸಿಸಿ, ಇದೀಗ ಇದೇ ವಾರ ಅಡಿಲೇಡ್‌ನಲ್ಲಿ ಆರಂಭವಾಗುತ್ತಿರುವ ಎರಡನೇ ಸುತ್ತಿನ ಸಭೆಗೂ ಕೈಬಿಟ್ಟಿದೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ‘ದ ಟೈಮ್ಸ್ ಆ್ ಇಂಡಿಯಾ’ ಹೇಳಿದೆ.

ಮುಂಬೈ(ನ.22): ಈಗಾಗಲೇ ನ್ಯಾ. ಲೋಧಾ ಸಮಿತಿಯಿಂದ ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯಿಂದಲೂ ಗದಾಪ್ರಹಾರವಾಗಿದೆ.

ಐಸಿಸಿಯ ಸ್ವತಂತ್ರ ಮುಖ್ಯಸ್ಥರಾಗಿ ಶಶಾಂಕ್ ಮನೋಹರ್ ಆಯ್ಕೆಯಾದಾಗಿನಿಂದಲೂ ಬಿಸಿಸಿಐ ಮತ್ತು ಐಸಿಸಿ ನಡುವಣದ ಸಂಬಂಧ ಹದಗೆಟ್ಟಿದ್ದು, ಇದೀಗ ಇದು ಮತ್ತೊಂದು ಮಜಲು ಮುಟ್ಟಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಬಿಸಿಸಿಐ ಅನ್ನು ಐಸಿಸಿ ತನ್ನ ಪ್ರಮುಖ ಕಾರ್ಯಕಾರಿ ಸಮಿತಿ ಸಭೆಯಿಂದ ನಿರ್ಬಂಧಿಸಿರುವುದು ಅನುರಾಗ್ ಠಾಕೂರ್ ನೇತೃತ್ವದ ಬಿಸಿಸಿಐ ಚಡಪಡಿಕೆಯನ್ನು ಹೆಚ್ಚಿಸಿದೆ.

‘‘ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸಿಂಗಪುರದಲ್ಲಿ ನಡೆದಿದ್ದ ಐಸಿಸಿ ಕಾರ್ಯಕಾರಿ ಸಮಿತಿ ಸಭೆಗೆ ನನ್ನನ್ನು ಆಹ್ವಾನಿಸದ ಐಸಿಸಿ, ಇದೀಗ ಇದೇ ವಾರ ಅಡಿಲೇಡ್‌ನಲ್ಲಿ ಆರಂಭವಾಗುತ್ತಿರುವ ಎರಡನೇ ಸುತ್ತಿನ ಸಭೆಗೂ ಕೈಬಿಟ್ಟಿದೆ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ‘ದ ಟೈಮ್ಸ್ ಆ್ ಇಂಡಿಯಾ’ ಹೇಳಿದೆ.

‘‘ಅಡಿಲೇಡ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ನಾನು ಭಾಗವಹಿಸಲು ಇಚ್ಛಿಸುತ್ತೇನೆ ಎಂದು ಬಿಸಿಸಿಐ ಸ್ವತಃ ಐಸಿಸಿಗೆ ಪತ್ರ ಬರೆದರೂ, ಕಾರ್ಯಕಾರಿ ಗುಂಪನ್ನು ನೇಮಿಸುವುದು ನನ್ನ ಕೆಲಸ ಎಂದು ಐಸಿಸಿ ಪ್ರತಿಕ್ರಿಯಿಸಿದೆ’’ ಎನ್ನಲಾಗಿದೆ. ಅಂದಹಾಗೆ ಈ ಕಾರ್ಯಕಾರಿ ಸಮಿತಿಯು ವಿಶ್ವ ಕ್ರಿಕೆಟ್‌'ನ ಆದಾಯದ ಹಂಚಿಕೆಯನ್ನೂ ಒಳಗೊಂಡಂತೆ ಐಸಿಸಿಯ ಮುಂದಿನ ಆಡಳಿತ ಸ್ವರೂಪವನ್ನು ಪರವೀಕ್ಷಿಸುವ ಅಧಿಕಾರವನ್ನು ಹೊಂದಿದೆ. ಇಂಥ ಮಹತ್ವದ ಸಭೆಗೇ ಬಿಸಿಸಿಐಗೆ ಆಹ್ವಾನವಿಲ್ಲದಿರುವುದು ಐಸಿಸಿ ಮತ್ತು ಬಿಸಿಸಿಐ ನಡುವಣದ ಕಂದಕವನ್ನು ಹೆಚ್ಚಿಸಿದೆ.