ದುಬೈ(ಸೆ.25): ಶ್ರೀಲಂಕಾ ಕ್ರಿಕೆಟಿಗರ ವಿರುದ್ಧ ಕೇಳಿ ಬಂದಿರುವ ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಗಂಭಿರವಾಗಿ ಪರಿಗಣಿಸಿರುವ ಐಸಿಸಿ ತನಿಖೆ ಆರಂಭಿಸಿದೆ.

ಇಂತದ್ದೇ ನಿರ್ದಿಷ್ಟ ಸರಣಿಯಲ್ಲಿ ಫಿಕ್ಸಿಂಗ್ ನಡೆದಿದೆ ಎನ್ನುವ ಬಗ್ಗೆ ಅನುಮಾನಗಳಿಲ್ಲ ಎಂದು ಐಸಿಸಿ ಹೇಳಿದೆ.

ಲಂಕಾ ಇತ್ತೀಚೆಗಷ್ಟೇ ಜಿಂಬಾಬ್ವೆ ಹಾಗೂ ಭಾರತ ವಿರುದ್ಧ ಸರಣಿ ಸೋತಿತ್ತು. ಮಾಜಿ ಕ್ರಿಕೆಟಿಗ ವಿಕ್ರಮಸಿಂಘೆ ತಂಡ ಫಿಕ್ಸಿಂಗ್ ನಡೆಸಿದೆ ಎಂದು ಆರೋಪಿಸಿದ್ದರು.