ಸೆಮಿ'ಫೈನಲ್ ತಲುಪುವ 4 ತಂಡಗಳು ತಲಾ 45 ಸಾವಿರ ಡಾಲರ್ ಬಹುಮಾನ ಪಡೆದುಕೊಳ್ಳಲಿವೆ.

ದುಬೈ(ಮೇ.14): ಮುಂದಿನ ತಿಂಗಳು ಜೂನ್ 1-18ರ ವರೆಗೆ ಇಂಗ್ಲೆಂಡ್'ನಲ್ಲಿ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿ'ಯ ಫೈನಲ್'ನಲ್ಲಿ ವಿಜೇತರಾಗುವ ತಂಡಕ್ಕೆ 15 ಕೋಟಿ ರೂ. ಬಹುಮಾನ ದೊರಯಲಿದೆ. ಅದೇ ರೀತಿ ರನ್ನರ್ ಅಫ್ ತಂಡಕ್ಕೆ 7.5 ಕೋಟಿ ರೂ. ಪಡೆದುಕೊಳ್ಳಲಿದೆ ಎಂದು ಐಸಿಸಿ ಪ್ರಕಟಿಸಿದೆ.

ಸೆಮಿ'ಫೈನಲ್ ತಲುಪುವ 4 ತಂಡಗಳು ತಲಾ 45 ಸಾವಿರ ಡಾಲರ್ ಬಹುಮಾನ ಪಡೆದುಕೊಳ್ಳಲಿವೆ. ಈ ಮೊದಲು 4 ಮಿಲಿಯನ್ ಡಾಲರ್ ಇದ್ದ ಬಹುಮಾನದ ಹಣವನ್ನು 4.5 ಮಿಲಿಯನ್ ಡಾಲರ್'ಗೆ ಹೆಚ್ಚಿಸಲಾಗಿದೆ. ಚಾಂಪಿಯನ್ಸ್ ಟ್ರೋಪಿ'ಯಲ್ಲಿ ಭಾರತ ತಂಡ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ.