ಇನ್ಮುಂದೆ ಎಲ್ಲಾ ಟೆಸ್ಟ್‌ ಆಡುವ ರಾಷ್ಟ್ರಗಳು ಜೆರ್ಸಿ ಸಂಖ್ಯೆ ಹಾಗೂ ಹೆಸರುಗಳನ್ನು ಜೆರ್ಸಿ ಮೇಲೆ ಮುದ್ರಿಸಲು ಅನುಮತಿ ನೀಡಲಾಗಿದೆ. ಟೆಸ್ಟ್‌ ಕ್ರಿಕೆಟನ್ನು ಮತ್ತಷ್ಟು ಜನಪ್ರಿಯಗೊಳಿಸಲು ಈ ಪ್ರಯೋಗಕ್ಕೆ ಮುಂದಾಗಿದೆ.

ನವದೆಹಲಿ[ಮಾ]: ಟೆಸ್ಟ್‌ ಕ್ರಿಕೆಟ್‌ನಲ್ಲೂ ಆಟಗಾರರ ಜೆರ್ಸಿ ಮೇಲೆ ಹೆಸರು ಹಾಗೂ ಸಂಖ್ಯೆಗಳನ್ನು ಹಾಕಲು ಐಸಿಸಿ ಹಸಿರು ನಿಶಾನೆ ತೋರಿದೆ. 

ಇನ್ಮುಂದೆ ಎಲ್ಲಾ ಟೆಸ್ಟ್‌ ಆಡುವ ರಾಷ್ಟ್ರಗಳು ಜೆರ್ಸಿ ಸಂಖ್ಯೆ ಹಾಗೂ ಹೆಸರುಗಳನ್ನು ಜೆರ್ಸಿ ಮೇಲೆ ಮುದ್ರಿಸಲು ಅನುಮತಿ ನೀಡಲಾಗಿದೆ. ಟೆಸ್ಟ್‌ ಕ್ರಿಕೆಟನ್ನು ಮತ್ತಷ್ಟು ಜನಪ್ರಿಯಗೊಳಿಸಲು ಈ ಪ್ರಯೋಗಕ್ಕೆ ಮುಂದಾಗಿದೆ. ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳೆ ಈ ವ್ಯವಸ್ಥೆ ಜಾರಿಗೆ ಬರಲಿದೆ. 

ಇನ್ಮುಂದೆ ಟೆಸ್ಟ್‌ನಲ್ಲೂ ಜೆರ್ಸಿ ನಂಬರ್‌?

ವಿಶ್ವಕಪ್‌ ಬಳಿಕ ಭಾರತ ತಂಡ ವಿಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, ಆ ವೇಳೆ ಆಟಗಾರರು ಹೆಸರು ಹಾಗೂ ಸಂಖ್ಯೆಯುಳ್ಳ ಜೆರ್ಸಿಗಳನ್ನು ತೊಟ್ಟು ಆಡುವುದನ್ನು ನೋಡಬಹುದಾಗಿದೆ. ಪ್ರತಿ ತಂಡದ ಆಟಗಾರರಿಗೆ 1ರಿಂದ 99ರ ವರೆಗಿನ ಸಂಖ್ಯೆಯನ್ನು ತಮ್ಮ ಜೆರ್ಸಿ ಮೇಲೆ ಹಾಕಿಕೊಳ್ಳಲು ಅವಕಾಶವಿರಲಿದೆ. ಭಾರತ ತಂಡ ಸಚಿನ್‌ ತೆಂಡುಲ್ಕರ್‌ ಬಳಸುತ್ತಿದ್ದ 10 ಹಾಗೂ ಎಂ.ಎಸ್‌. ಧೋನಿ ಬಳಸುವ 7 ಸಂಖ್ಯೆಯನ್ನು ಯಾವ ಆಟಗಾರರಿಗೂ ನೀಡದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.