ನೂತನ ಶಿಫಾರಸಿನ ಪ್ರಕಾರ ಬ್ಯಾಟ್ ಅಂಚುಗಳ ದಪ್ಪ 40 ಮಿಲಿ ಮೀಟರ್ ಹಾಗೂ ಬ್ಲೆಡ್‌ನ ದಪ್ಪ 67 ಮಿಲಿ ಮೀಟರ್ ಮೀರಬಾರದು. ಪ್ರಸ್ತುತ ಹಲವು ಆಟಗಾರರು 50 ಮಿಲಿ ಮೀಟರ್ ಗಾತ್ರದ ಬ್ಯಾಟ್‌ಗಳನ್ನು ಬಳಕೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆ ಅವಕಾಶವಿರುವುದಿಲ್ಲ.
ಲಂಡನ್(ಜೂ.25): ಟಿ20 ಪಂದ್ಯಗಳಲ್ಲೂ ಡಿಆರ್ಎಸ್ (ಅಂಪೈರ್ ತೀರ್ಪು ಮೇಲ್ಮನವಿ ಪದ್ಧತಿ) ಅಳವಡಿಸಬೇಕೆಂಬ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಶಿಫಾರಸ್ಸಿಗೆ, ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಸಮಿತಿ ಸಮ್ಮತಿ ಸೂಚಿಸಿದೆ. ಅಕ್ಟೋಬರ್ 1ರಿಂದ ಟಿ20ಯಲ್ಲಿ ಡಿಆರ್ಎಸ್ ಜಾರಿಗೆ ಬರಲಿದೆ.
ಇನ್ನು ಔಟ್ ಆದ ಸಂದರ್ಭದಲ್ಲಿ ಆಟಗಾರರು ಡಿಆರ್ಎಸ್ ಮೊರೆ ಹೋದಾಗ 3ನೇ ಅಂಪೈರ್, ಫೀಲ್ಡ್ ಅಂಪೈರ್ ತೀರ್ಮಾನಕ್ಕೆ ಬದ್ಧವಾದರೆ ತಂಡಗಳು ಮನವಿ ಕಳೆದುಕೊಳ್ಳುವುದು ಬೇಡ ಎಂಬ ಶಿಫಾರಸು ಹಾಗೂ ಬ್ಯಾಟ್ ಗಾತ್ರ, ರನೌಟ್, ಸ್ಟಂಪಿಂಗ್ ನಿಯಮ ಮತ್ತು ಅನುಚಿತವಾಗಿ ವರ್ತಿಸುವ ಆಟಗಾರರನ್ನು ಮೈದಾನದಿಂದ ಹೊರಗೆ ಕಳಿಸುವ ಅಧಿಕಾರವನ್ನು ಅಂಪೈರ್ಗಳಿಗೆ ನೀಡುವ ಶಿಫಾರಸ್ಸಿಗೂ ಐಸಿಸಿ ಹಸಿರು ನಿಶಾನೆ ತೋರಿದೆ.
ರೆಡ್ ಕಾರ್ಡ್
ಇನ್ನು ಆಟಗಾರರು ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದರೆ ಫುಟ್ಬಾಲ್ನಲ್ಲಿ ಚಾಲ್ತಿಯಲ್ಲಿರುವಂತೆ, ಅಂಪೈರ್ ಕೆಂಪು ಕಾರ್ಡ್ ನೀಡಿ ಮೈದಾನದಿಂದ ಹೊರಹಾಕುವ ಅಧಿಕಾರ ಸಹ ನೀಡಲಾಗಿದೆ.
ಬ್ಯಾಟ್ ಗಾತ್ರಕ್ಕೆ ನಿರ್ಬಂಧ
ನೂತನ ಶಿಫಾರಸಿನ ಪ್ರಕಾರ ಬ್ಯಾಟ್ ಅಂಚುಗಳ ದಪ್ಪ 40 ಮಿಲಿ ಮೀಟರ್ ಹಾಗೂ ಬ್ಲೆಡ್ನ ದಪ್ಪ 67 ಮಿಲಿ ಮೀಟರ್ ಮೀರಬಾರದು. ಪ್ರಸ್ತುತ ಹಲವು ಆಟಗಾರರು 50 ಮಿಲಿ ಮೀಟರ್ ಗಾತ್ರದ ಬ್ಯಾಟ್ಗಳನ್ನು ಬಳಕೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅದಕ್ಕೆ ಅವಕಾಶವಿರುವುದಿಲ್ಲ.
ರನೌಟ್ ನಿಯಮ ಬದಲು
ಇನ್ನು ರನೌಟ್ ಅಥವಾ ಸ್ಟಂಪ್ ಮಾಡುವ ಸಂದರ್ಭದಲ್ಲಿ ಬ್ಯಾಟ್ಸ್ಮನ್ ಒಮ್ಮೆ ಕ್ರಿಸ್ನಲ್ಲಿ ಬ್ಯಾಟ್ ಇಟ್ಟಿದ್ದರೆ ಸಾಕು. ಬೇಲ್ಸ್ ಹಾರುವಾಗ ಬ್ಯಾಟ್ ಗಾಳಿಯಲ್ಲಿದ್ದರೂ ಔಟ್ ಎಂದು ನಿರ್ಧರಿಸುವಂತಿಲ್ಲ.
