ಐಪಿಎಲ್ ಟೂರ್ನಿ ಆಡೋ ವಿದೇಶಿ ಕ್ರಿಕೆಟಿಗರಿಗೆ ಐಸಿಸಿ ಬಿಗ್ ಶಾಕ್!

ICC contemplating over limiting players to one overseas T20 league
Highlights

ಐಪಿಎಲ್, ಬಿಗ್ ಬ್ಯಾಶ್ ಸೇರಿದಂತೆ  ವಿಶ್ವದೆಲ್ಲಡೆ ಕ್ರಿಕೆಟ್ ಲೀಗ್ ಟೂರ್ನಿಗಳು ಜನಪ್ರೀಯವಾಗಿದೆ. ಆದರೆ ಇದೀಗ ಈ ಟೂರ್ನಿಯಲ್ಲಿ ಪಾಲ್ಗೊಳ್ಳೋ ಆಟಗಾರರಿಗೆ ಸೈಲೆಂಟ್ ಶಾಕ್ ನೀಡಲು ಐಸಿಸಿ ಪ್ಲಾನ್ ಮಾಡಿದೆ. ಐಸಿಸಿ ರೂಪಿಸಿದ ಯೋಜನೆ ಏನು? ಇಲ್ಲಿದೆ ವಿವರ.

ದುಬೈ(ಜೂ.23): ಕ್ರಿಕೆಟ್ ರಾಷ್ಟ್ರಗಳಲ್ಲಿ ಈಗ ಎಲ್ಲಿ ನೋಡಿದರೂ ಲೀಗ್ ಟೂರ್ನಿಗಳದ್ದೇ ಮೇಲುಗೈ. ತಮ್ಮ ತಂಡಕ್ಕಿಂತ ಹೆಚ್ಚಾಗಿ ಆಟಗಾರರು ಲೀಗ್ ಟೂರ್ನಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇದೀಗ ಐಪಿಎಲ್ ಸೇರಿದಂತೆ ಇತರ ಲೀಗ್ ಟೂರ್ನಿ ಆಡೋ ಕ್ರಿಕೆಟಿಗರಿಗೆ ಶಾಕ್ ನೀಡಲು ಐಸಿಸಿ ಯೋಜನೆ ರೂಪಿಸುತ್ತಿದೆ.

ಭಾರತದಲ್ಲಿ ಐಪಿಎಲ್, ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಶ್, ವೆಸ್ಟ್ಇಂಡೀಸ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಹಲವು ಲೀಗ್ ಟೂರ್ನಿಗಳಲ್ಲಿ  ವಿವಿದ ದೇಶದ ಕ್ರಿಕೆಟಿಗರು ಸಕ್ರೀಯರಾಗಿದ್ದಾರೆ. ಆದರೆ ಐಸಿಸಿಯ ನೂತನ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ನಿಯದ ಪ್ರಕಾರ, ಒರ್ವ ಕ್ರಿಕೆಟಿಗನಿಗೆ ಒಂದೇ ವಿದೇಶಿ ಲೀಗ್ ಟೂರ್ನಿ ಆಡಲು ಅನುಮತಿ ಸಿಗಲಿದೆ. 

ತವರಿನ ಲೀಗ್ ಟೂರ್ನಿ ಹೊರತು ಪಡಿಸಿ, ಎಲ್ಲಾ ವಿದೇಶಿ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವಂತಿಲ್ಲ. ಸದ್ಯ ಕ್ರಿಕೆಟಿಗರು ಐಪಿಎಲ್, ಪಾಕಿಸ್ತಾನ ಸೂಪರ್ ಲೀಗ್, ಬಿಗ್‌ಬ್ಯಾಶ್ ಸೇರಿದಂತೆ ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳೋ ಅವಕಾಶವಿದೆ. ಆದರೆ ನೂತನ ನಿಯಮ ಜಾರಿಯಾದರೆ, ವಿದೇಶಿ ಕ್ರಿಕೆಟಿಗ ಕೇವಲ ಒಂದು ಲೀಗ್ ಟೂರ್ನಿಯನ್ನ ಆಯ್ಕೆ ಮಾಡಬಹುದಾಗಿದೆ.

ವೆಸ್ಟ್ಇಂಡೀಸ್ ಕ್ರಿಕೆಟಿಗ ಕ್ರೀಸ್ ಗೇಲ್ ಸೇರಿದಂತೆ ಹಲವು ಕ್ರಿಕೆಟಿಗರು ಐಪಿಎಲ್, ಪಿಎಸ್‌ಎಲ್, ಬಿಗ್ ಬ್ಯಾಶ್ ಸೇರಿದಂತೆ ಇನ್ನಿತರ ಲೀಗ್ ಟೂರ್ನಿ ಆಡುತ್ತಿದ್ದಾರೆ. ಆದರೆ ನೂತನ ನಿಯಮ ಜಾರಿಯಾದರೆ, ಗೇಲ್ ಯಾವುದಾದರೊಂದು ಲೀಗ್ ಟೂರ್ನಿ ಆಯ್ಕೆ ಮಾಡಬೇಕಾಗಿದೆ.

ಐಸಿಸಿ ನೂತನ ನಿಯಮ ಮುಂದಿನವಾರ ನಡೆಯಲಿರುವ ಐಸಿಸಿ ಸಭೆಯಲ್ಲಿ ಚರ್ಚೆಗೆ ಒಳಪಡಲಿದೆ. ಈ ನಿಯಮಕ್ಕೆ ಹಲವು ಕ್ರಿಕೆಟ್ ಮಂಡಳಿಗಳು ವಿರೋಧ ವ್ಯಕ್ತಪಡಿಸಿದೆ. ಆದರೆ ಇದರಿಂದ ಭಾರತೀಯ ಕ್ರಿಕೆಟಿಗರು ಹಾಗೂ ಐಪಿಎಲ್ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

loader