2008ರ ಶ್ರೀಲಂಕಾ ಸರಣಿಯ ಸಂದರ್ಭದಲ್ಲೇ ಬಿಸಿಸಿಐ, ವಿವಾದಿತ ಯುಡಿಆರ್ಎಸ್ ಅನ್ನ ತಿರಸ್ಕರಿಸಿತ್ತು. ಹಾಕ್ ಐನ ಬಾಲ್ ಟ್ರಾಕಿಂಗ್ ಡಿವೈಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.

ಮುಂಬೈ(ಅ.15): ಕ್ರಿಕೆಟ್ ಜಗತ್ತಿನ ಬಹುತೇಕ ರಾಷ್ಟ್ರಗಳು ಅಂಪೈರ್ ಡಿಸಿಶನ್ ರಿವೀವ್ ಸಿಸ್ಟಂ(UDRS) ಅನ್ನ ಅಳವಡಿಸಿಕೊಂಡಿವೆ. ಆದರೆ, ಬಿಸಿಸಿಐ ಮಾತ್ರ ಇದನ್ನ ಒಪ್ಪಿಲ್ಲ. 2008ರಿಂದೀಚೆಗೆ ಭಾರತದಲ್ಲಿ ನಡೆದ ಯಾವುದೇ ಸರಣಿಯಲ್ಲಿ ಯುಡಿಆರ್ಎಸ್ ಬಳಕೆಯಾಗಿಲ್ಲ. ಇದೀಗ, ಭಾರತವೂ ಉಡಿಆರ್ಎಸ್ ಅಳವಡಿಸಿಕೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದ್ದು, ಐಸಿಸಿಯ ಜನರಲ್ ಮ್ಯಾನೇಜರ್ ಜಿಯೋಫ್ ಅಲ್ಲರಡೈಸ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಯುಡಿಆರ್ಎಸ್ ಅಳವಡಿಕೆಗೆ ಬಿಸಿಸಿಐ ಅನ್ನ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಬಾಲ್ ಟ್ರಾಕಿಂಗ್ ಟೆಕ್ನಾಲಜಿ ಕಂಪನಿ ಹಾಕ್ ಐ ಸಂಸ್ಥೆಯ ತಜ್ಞರ ಜೊತೆ ಈ ವಾರ ಭಾರತಕ್ಕೆ ಭೇಟಿ ನೀಡಲಿರುವ ಐಸಿಸಿ ಜಿಎಂ, ಮುಂದಿನ ಸರಣಿಯಿಂದಲೇ ಯುಡಿಆರ್ಎಸ್ ಅಳವಡಿಕೆ ಬಗ್ಗೆ ಬಿಸಿಸಿಐ ಅಧ್ಯಕ್ಷರನ್ನ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ.

2008ರ ಶ್ರೀಲಂಕಾ ಸರಣಿಯ ಸಂದರ್ಭದಲ್ಲೇ ಬಿಸಿಸಿಐ, ವಿವಾದಿತ ಯುಡಿಆರ್ಎಸ್ ಅನ್ನ ತಿರಸ್ಕರಿಸಿತ್ತು. ಹಾಕ್ ಐನ ಬಾಲ್ ಟ್ರಾಕಿಂಗ್ ಡಿವೈಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.