ನಿವೃತ್ತಿ ಬಗ್ಗೆ ಕೊನೆಗೂ ತುಟಿಬಿಚ್ಚಿದ ಯುವಿ; ಯುವಿ ಮುಂದಿನ ಪ್ಲಾನ್ ಏನು ಗೊತ್ತಾ..?

First Published 28, Feb 2018, 8:06 PM IST
I will take a call on my career after 2019 Yuvraj
Highlights

ನನ್ನ ಪಾಲಿಗೆ ಈ ಬಾರಿಯ ಐಪಿಎಲ್ ಮಹತ್ವಪೂರ್ಣವಾಗಿದ್ದು, ನಾನು ಐಪಿಎಲ್'ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದೇನೆ, 2019ರ ಬಳಿಕ ನನ್ನ ವೃತ್ತಿ ಜೀವನದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಚಂಡಿಘಡ(ಫೆ.28): ಸದ್ಯ ಕಳಪೆ ಫಾರ್ಮ್'ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ತಮ್ಮ ವೃತ್ತಿಜೀವನದ ಬಗ್ಗೆ ತುಟಿಬಿಚ್ಚಿದ್ದು, 2019ರ ಬಳಿಕ ಕ್ರಿಕೆಟ್'ಗೆ ವಿದಾಯ ಘೋಷಿಸುವುದಾಗಿ ಹೇಳಿದ್ದಾರೆ.

2017ರ ಜೂನ್ ಬಳಿಕ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಯುವಿ, ಮುಂಬರುವ ಐಪಿಎಲ್'ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದು, 2019ರ ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.

ನನ್ನ ಪಾಲಿಗೆ ಈ ಬಾರಿಯ ಐಪಿಎಲ್ ಮಹತ್ವಪೂರ್ಣವಾಗಿದ್ದು, ನಾನು ಐಪಿಎಲ್'ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದೇನೆ, 2019ರ ಬಳಿಕ ನನ್ನ ವೃತ್ತಿ ಜೀವನದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

2011ರ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು.

loader