ಕೊಹ್ಲಿಯನ್ನು ಔಟ್ ಮಾಡಿದ್ದು ಅತ್ಯಂತ ಖುಷಿ ತಂದಿದೆ ಎಂದಿರುವ 24 ವರ್ಷದ ಎಡಗೈ ಮಧ್ಯಮ ವೇಗಿ, ‘ವಿರಾಟ್'ರನ್ನು ಔಟ್ ಮಾಡಿದ ವಿಡಿಯೋವನ್ನು ಸುರಕ್ಷಿತವಾಗಿ ಲಾಕರ್‌ನಲ್ಲಿಡುತ್ತೇನೆ’ ಎಂದಿದ್ದಾರೆ.

ಲಂಡನ್[ಜು.27]: ಪಂದ್ಯದ ಮೊದಲ ದಿನವಾದ ಬುಧವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ವಿಕೆಟ್ ಪಡೆದ ಪಾಲ್ ವಾಲ್ಟರ್, ತಾವಿನ್ನೂ ಖುಷಿಯ ಅಲೆಯಲ್ಲಿ ತೇಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ವಿಶ್ವದ ಶ್ರೇಷ್ಠ ಆಟಗಾರ ಕೊಹ್ಲಿಯನ್ನು ಔಟ್ ಮಾಡಿದ್ದು ಅತ್ಯಂತ ಖುಷಿ ತಂದಿದೆ ಎಂದಿರುವ 24 ವರ್ಷದ ಎಡಗೈ ಮಧ್ಯಮ ವೇಗಿ, ‘ವಿರಾಟ್'ರನ್ನು ಔಟ್ ಮಾಡಿದ ವಿಡಿಯೋವನ್ನು ಸುರಕ್ಷಿತವಾಗಿ ಲಾಕರ್‌ನಲ್ಲಿಡುತ್ತೇನೆ’ ಎಂದಿದ್ದಾರೆ.

Scroll to load tweet…

ಕೊಹ್ಲಿ ವಿಕೆಟ್ ಪಡೆದಿದ್ದು ನಾನೇ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿರುವ ವಾಲ್ಟರ್, ನನ್ನ ಕ್ರಿಕೆಟ್ ಜೀವನದ ಅವಿಸ್ಮರಣೀಯ ಕ್ಷಣ ಎಂದಿದ್ದಾರೆ. ವಿರಾಟ್ ಕೊಹ್ಲಿ 69 ರನ್ ಬಾರಿಸಿ ವಾಲ್ಟರ್’ಗೆ ವಿಕೆಟ್ ಒಪ್ಪಿಸಿದ್ದರು.