ಮುಂಬೈ(ಮಾ.05): ಪಾಕಿಸ್ತಾನಕ್ಕೆ ಕ್ರಿಕೆಟ್‌ ಬಹಿಷ್ಕಾರ ಹಾಕುವ ವಿಚಾರದಲ್ಲಿ ಬಿಸಿಸಿಐನಲ್ಲಿ ಒಳ ಜಗಳ ನಡೆದಿದೆ ಎನ್ನುವುದು ಬಹಿರಂಗವಾಗಿದೆ. 

ಪಾಕ್‌ ಆಟಗಾರರಿಗೆ ವೀಸಾ: ಬಿಸಿಸಿಐ ಮೇಲೆ ಐಸಿಸಿ ಒತ್ತಡ!

ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವ ರಾಷ್ಟ್ರಗಳನ್ನು ಕ್ರಿಕೆಟ್‌ನಿಂದ ದೂರವಿಡುವಂತೆ ಬಿಸಿಸಿಐ ಮಾಡಿದ್ದ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಈ ಸಂಬಂಧ ಸೋಮವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ, ‘ಪತ್ರವನ್ನು ನಾನು ಬರೆದಿಲ್ಲ. ನನಗೆ ಏನೂ ತಿಳಿದಿಲ್ಲ’ ಎಂದು ಜಾರಿಕೊಂಡಿದ್ದಾರೆ.

ವಿಶ್ವಕಪ್ 2019: ಇಂಡೋ-ಪಾಕ್ ಪಂದ್ಯದ ಬಗ್ಗೆ ನಿರ್ಧಾರ ಪ್ರಕಟಿಸಿದ ಐಸಿಸಿ

ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿಯ ಮುಖ್ಯಸ್ಥ ವಿನೋದ್‌ ರಾಯ್‌ ಸೂಚನೆಯಂತೆ ಬಿಸಿಸಿಐ ಸಿಇಒ ರಾಹುಲ್‌ ಜೋಹ್ರಿ ಐಸಿಸಿಗೆ ಪತ್ರ ಬರೆದಿದ್ದರು. ಶನಿವಾರ ಮುಕ್ತಾಯಗೊಂಡ ತ್ರೈಮಾಸಿಕ ಸಭೆಯ ಕೊನೆ ಅವಧಿಯಲ್ಲಿ ಐಸಿಸಿ ಅಧ್ಯಕ್ಷ ಶಶಾಂಕ್‌ ಮನೋಹರ್‌, ಬಿಸಿಸಿಐ ಪತ್ರದ ಬಗ್ಗೆ ಪ್ರಸ್ತಾಪಿಸಿ ‘ಈ ರೀತಿಯ ಸಮಸ್ಯೆಗಳನ್ನು ಬರೆಹರಿಸಲು ಸಾಧ್ಯವಿಲ್ಲ. ಇದು ಐಸಿಸಿಯ ಕಾರ್ಯವ್ಯಾಪ್ತಿಗೆ ಮೀರಿದ್ದು’ ಎಂದಿದ್ದರು. ಸಭೆಯಲ್ಲಿ ಬಿಸಿಸಿಐ ಅನ್ನು ಪ್ರತಿನಿಧಿಸಿದ್ದ ಅಮಿತಾಭ್‌, ಇದೀಗ ಪತ್ರದ ವಿವರ ನನಗೆ ತಿಳಿದಿಲ್ಲ ಎಂದಿರುವುದು ವಿವಾದಕ್ಕೆ ಕಾರಣವಾಗಿದೆ.