Asianet Suvarna News Asianet Suvarna News

ಮ್ಯಾಚ್ ಫಿನಿಶರ್ ಆಗಲು ರೆಡಿಯೆಂದ ಪಾಂಡ್ಯ

ನಾನು ಕೇವಲ ಬ್ಯಾಟಿಂಗ್ ಇಲ್ಲವೇ ಬೌಲಿಂಗ್'ಗೆ ಮಾತ್ರ ಸೀಮಿತವಾಗಲು ಬಯಸುವುದಿಲ್ಲ, ಬದಲಾಗಿ ಆಲ್ರೌಂಡರ್ ಆಗುವತ್ತ ಹೆಚ್ಚು ಗಮನ ಹರಿಸುತ್ತೇನೆಂದು ಪಾಂಡ್ಯ ಹೇಳಿದ್ದಾರೆ.  

I back myself to finish games for India says Hardik Pandya
  • Facebook
  • Twitter
  • Whatsapp

ಜಮೈಕಾ(ಜು.05): ಐಪಿಎಲ್, ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಮಿಂಚಿನ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದ ಆಲ್‌'ರೌಂಡರ್ ಹಾರ್ದಿಕ್ ಪಾಂಡ್ಯ ತಾವು ಟೀಂ ಇಂಡಿಯಾದಲ್ಲಿ ಫಿನಿಶರ್ ಜವಾಬ್ದಾರಿ ನಿಭಾಯಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

‘ಪಂದ್ಯದ ಕೊನೆಯ ಹಂತದಲ್ಲಿ ಬ್ಯಾಟಿಂಗ್ ನಡೆಸುವುದು ಕಠಿಣ ಎಂಬುದು ನನಗೆ ಮನವರಿಕೆಯಾಗಿದೆ. ಅಂತಹ ಸಂದರ್ಭದಲ್ಲಿ ಬೌಲರ್‌ಗಳು ಒತ್ತಡ ಹೇರಲು ಪ್ರಯತ್ನಿಸುತ್ತಾರೆ. ಇಂತಹ ಸನ್ನಿವೇಶಗಳನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ’ ಎಂದು ಪಾಂಡ್ಯ ಹೇಳಿದ್ದಾರೆ.

ನಾನು ಕೇವಲ ಬ್ಯಾಟಿಂಗ್ ಇಲ್ಲವೇ ಬೌಲಿಂಗ್'ಗೆ ಮಾತ್ರ ಸೀಮಿತವಾಗಲು ಬಯಸುವುದಿಲ್ಲ, ಬದಲಾಗಿ ಆಲ್ರೌಂಡರ್ ಆಗುವತ್ತ ಹೆಚ್ಚು ಗಮನ ಹರಿಸುತ್ತೇನೆಂದು ಪಾಂಡ್ಯ ಹೇಳಿದ್ದಾರೆ.  

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಏಕಾಂಗಿ ಹೋರಾಟ ನಡೆಸಿದ ಪಾಂಡ್ಯ, ಕೇವಲ 46 ಎಸೆತಗಳಲ್ಲಿ 76 ರನ್ ಸಿಡಿಸಿ ಗಮನ ಸೆಳೆದಿದ್ದರು.

Follow Us:
Download App:
  • android
  • ios