ಭಾರತ ಪರ ಸಾಕಷ್ಟು ಪಂದ್ಯಗಳಲ್ಲಿ ಆಪತ್ಬಾಂದವನಾಗಿ ಗುರುತಿಸಿಕೊಂಡಿರುವ ರಹಾನೆ, ಶ್ರೀಲಂಕಾ ವಿರುದ್ಧದ 3 ಟೆಸ್ಟ್ ಪಂದ್ಯಗಳಲ್ಲಿ ಕೇವಲ 17 ರನ್ ಅಷ್ಟೇ ಬಾರಿಸಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

ಕೇಪ್'ಟೌನ್(ಡಿ.30): ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ 2018 ರ ವರ್ಷವನ್ನು ಸ್ಮರಣೀಯವಾಗಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನಗೆ ತುಂಬಾ ಆತ್ಮವಿಶ್ವಾಸವಿದೆ, 2018 ನನ್ನ ವರ್ಷವಾಗಿರಲಿದೆ. ನೂತನ ವರ್ಷ ನನ್ನ ಮುಂದೆ ಸಾಕಷ್ಟ ಸವಾಲುಗಳಿವೆ. ಸದ್ಯಕ್ಕೆ ದಕ್ಷಿಣ ಆಫ್ರಿಕಾ ಸರಣಿಯ ಮೇಲೆ ಸಾಕಷ್ಟು ಗಮನ ಹರಿಸುತ್ತಿದ್ದೇನೆ ಎಂದು ರಹಾನೆ ಹೇಳಿದ್ದಾರೆ.

ಭಾರತ ಪರ ಸಾಕಷ್ಟು ಪಂದ್ಯಗಳಲ್ಲಿ ಆಪತ್ಬಾಂದವನಾಗಿ ಗುರುತಿಸಿಕೊಂಡಿರುವ ರಹಾನೆ, ಶ್ರೀಲಂಕಾ ವಿರುದ್ಧದ 3 ಟೆಸ್ಟ್ ಪಂದ್ಯಗಳಲ್ಲಿ ಕೇವಲ 17 ರನ್ ಅಷ್ಟೇ ಬಾರಿಸಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಜೀವನವೇ ಆಗಲಿ ಕ್ರೀಡೆಯೇ ಆಗಲಿ ಏಳು-ಬೀಳುಗಳು ಸಾಮಾನ್ಯ. ನಮ್ಮ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಮೇಲೇಳಬೇಕು ಎಂದು ರಹಾನೆ ಅಭಿಪ್ರಾಯಪಟ್ಟಿದ್ದಾರೆ.