Asianet Suvarna News Asianet Suvarna News

ಕೆನಡಾ ಓಪನ್: ಮುಗಿದ ಪ್ರಣಯ್ ಹೋರಾಟ..!

ಇದೇ ವೇಳೆ ಹಾಲಿ ಚಾಂಪಿಯನ್ನರಾದ ಭಾರತದ ಮನು ಅತ್ರಿ ಮತ್ತು ಬಿ. ಸುಮಿತ್ ರೆಡ್ಡಿ ಜೋಡಿ, ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.

HS Prannoy stunned in pre quarterfinals of Canada Open Grand Prix
  • Facebook
  • Twitter
  • Whatsapp

ಕಲ್ಗಾರಿ(ಜು.14): ಭಾರತದ ಭರವಸೆಯ ಶಟ್ಲರ್ ಎಚ್.ಎಸ್. ಪ್ರಣಯ್, ಕೆನಡಾ ಓಪನ್ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪುರುಷರ ಸಿಂಗಲ್ಸ್ ಪ್ರೀ ಕ್ವಾರ್ಟರ್‌'ಫೈನಲ್‌'ನಲ್ಲಿ 21-17, 14-21, 13-21 ಗೇಮ್‌'ಗಳಿಂದ 9ನೇ ಶ್ರೇಯಾಂಕಿತ ಕೊರಿಯಾದ ಜಿಯೊನ್ ಜಿನ್ ಎದುರು ಪರಾಭವಗೊಂಡರು.

ಇದೇ ವೇಳೆ ಹಾಲಿ ಚಾಂಪಿಯನ್ನರಾದ ಭಾರತದ ಮನು ಅತ್ರಿ ಮತ್ತು ಬಿ. ಸುಮಿತ್ ರೆಡ್ಡಿ ಜೋಡಿ, ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.

ಇಂದು ನಡೆದ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಮನು ಮತ್ತು ಸುಮಿತ್ ಜೋಡಿ 21-17, 17-21, 21-13 ಗೇಮ್‌'ಗಳಿಂದ ಕೊರಿಯಾದ ಚೊಯಿ ಸೊಲ್ಗ್ಯೂ ಮತ್ತು ಜೇ ಹ್ವಾನ್ ಕಿಮ್ ಜೋಡಿ ಎದುರು ಗೆಲುವು ಸಾಧಿಸಿತು. ಮಿಶ್ರ ಡಬಲ್ಸ್‌ನಲ್ಲಿ ಭಾರತದ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಕ್ವಾರ್ಟರ್ ಫೈನಲ್‌ಗೇರಿದೆ.

Follow Us:
Download App:
  • android
  • ios