Asianet Suvarna News Asianet Suvarna News

ಕಶ್ಯಪ್'ಗೆ ಶಾಕ್; ಪ್ರಣಯ್'ಗೆ ಯುಎಸ್ ಓಪನ್ ಮುಕುಟ

ಬ್ಯಾಡ್ಮಿಂಟನ್ ಕ್ರೀಡೆಯ ಕ್ಷೇತ್ರದಲ್ಲಿ ಭಾರತೀಯರು ಪ್ರಾಬಲ್ಯ ಸಾಧಿಸುತ್ತಿರುವುದಕ್ಕೆ ಸ್ಪಷ್ಟ ಕುರುಹು ಈ ಫೈನಲ್ ಪಂದ್ಯವಾಗಿದೆ. ಮಹಿಳೆಯರ ವಿಭಾಗದಲ್ಲಿ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ವಿಶ್ವದ ಟಾಪ್ ಆಟಗಾರ್ತಿಯರಾಗಿದ್ದಾರೆ. ಪುರುಷರ ಪೈಕಿ ಪಿ.ಕಶ್ಯಪ್, ಕೆ.ಶ್ರೀಕಾಂತ್, ಎಚ್.ಎಸ್.ಪ್ರಣಯ್ ಅವರು ವಿಶ್ವ ದಿಗ್ಗಜರಿಗೆ ಸೋಲುಣಿಸಿ ಚಾಂಪಿಯನ್ಸ್ ಎನಿಸುತ್ತಿದ್ದಾರೆ.

hs praanoy beats p kashyap to clinch us open grand prix badminton
  • Facebook
  • Twitter
  • Whatsapp

ಅನಾಹಿಂ, ಅಮೆರಿಕ(ಜುಲೈ 24): ಭಾರತದ ಎಚ್.ಎಸ್.ಪ್ರಣಯ್ ಅವರು ಯುಎಸ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿದ್ದಾರೆ. ಇಂದು ನಡೆದ ಭಾರತೀಯರಿಬ್ಬರ ರೋಚಕ ಹಣಾಹಣಿಯಲ್ಲಿ ಕಶ್ಯಪ್ ಸೋಲುಂಡಿದ್ದಾರೆ. 25 ವರ್ಷದ ಪ್ರಣಯ್ 21-15, 20-22, 21-12 ಗೇಮ್'ಗಳಿಂದ ಕಶ್ಯಪ್'ರನ್ನು ಮಣಿಸಿದ್ದಾರೆ.

ಬ್ಯಾಡ್ಮಿಂಟನ್ ಕ್ರೀಡೆಯ ಕ್ಷೇತ್ರದಲ್ಲಿ ಭಾರತೀಯರು ಪ್ರಾಬಲ್ಯ ಸಾಧಿಸುತ್ತಿರುವುದಕ್ಕೆ ಸ್ಪಷ್ಟ ಕುರುಹು ಈ ಫೈನಲ್ ಪಂದ್ಯವಾಗಿದೆ. ಮಹಿಳೆಯರ ವಿಭಾಗದಲ್ಲಿ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ವಿಶ್ವದ ಟಾಪ್ ಆಟಗಾರ್ತಿಯರಾಗಿದ್ದಾರೆ. ಪುರುಷರ ಪೈಕಿ ಪಿ.ಕಶ್ಯಪ್, ಕೆ.ಶ್ರೀಕಾಂತ್, ಎಚ್.ಎಸ್.ಪ್ರಣಯ್ ಅವರು ವಿಶ್ವ ದಿಗ್ಗಜರಿಗೆ ಸೋಲುಣಿಸಿ ಚಾಂಪಿಯನ್ಸ್ ಎನಿಸುತ್ತಿದ್ದಾರೆ.

Follow Us:
Download App:
  • android
  • ios