ಕೊನೆ 3 ದಿನದ ಟಿಕೆಟ್ ಹಣ ವಾಪಸ್: ಕೆಎಸ್‌'ಸಿಎ

How to Get India Vs Afghanistan Test Refund Tickets
Highlights

ಭಾರತ-ಆಫ್ಘಾನ್ ನಡುವಿನ ಐತಿಹಾಸಿಕ ಪಂದ್ಯವನ್ನು ಭಾರತ ಇನ್ನಿಂಗ್ಸ್ ಹಾಗೂ 262 ರನ್’ಗಳ ಭರ್ಜರಿ ಜಯ ಸಾಧಿಸಿತ್ತು. ಭಾರತ ತಂಡ ಆಫ್ಘಾನ್ ಪಡೆಯನ್ನು ಕೇವಲ ಒಂದೇ ದಿನದಲ್ಲಿ ಎರಡು ಬಾರಿ ಆಲೌಟ್ ಮಾಡಿ ಸ್ಮರಣೀಯ ಜಯ ಸಾಧಿಸಿತ್ತು.

ಬೆಂಗಳೂರು[ಜೂ.16]: ಭಾರತ-ಆಫ್ಘಾನಿಸ್ತಾನ ಟೆಸ್ಟ್ ಎರಡೇ ದಿನಕ್ಕೆ ಮುಕ್ತಾಯಗೊಂಡಿದ್ದರಿಂದ ಉಳಿದ 3 ದಿನಗಳ ಟಿಕೆಟ್ ಖರೀದಿಸಿದವರಿಗೆ, ಟಿಕೆಟ್ ಮೊತ್ತವನ್ನು ವಾಪಸ್ ನೀಡಲು ಕೆಎಸ್‌ಸಿಎ ನಿರ್ಧರಿಸಿದೆ.

www.insider.in ಮತ್ತು www.ticketgenie.in ತಾಣಗಳ ಮೂಲಕ ಆನ್‌ಲೈನ್ ಟಿಕೆಟ್ ಖರೀದಿಸಿದ್ದವರು ಅದೇ ತಾಣಗಳಿಗೆ ಭೇಟಿ ನೀಡಿ ಹಣ ಹಿಂಪಡೆಯಬಹುದಾಗಿದೆ. ಕ್ರೀಡಾಂಗಣದ ಕೌಂಟರ್‌ಗಳಲ್ಲಿ ಟಿಕೆಟ್ ಖರೀದಿಸಿದ್ದವರಿಗೆ ಜೂ.20ರಂದು ಬೆಳಗ್ಗೆ 11ರಿಂದ ರಾತ್ರಿ 8 ರವರೆಗೆ ಚಿನ್ನಸ್ವಾಮಿಯ ಗೇಟ್ ನಂ.2ರ ಕೌಂಟರ್‌ನಲ್ಲಿ ಹಣ ಮರುಪಾವತಿಸಲಾಗುವುದು.

ಭಾರತ-ಆಫ್ಘಾನ್ ನಡುವಿನ ಐತಿಹಾಸಿಕ ಪಂದ್ಯವನ್ನು ಭಾರತ ಇನ್ನಿಂಗ್ಸ್ ಹಾಗೂ 262 ರನ್’ಗಳ ಭರ್ಜರಿ ಜಯ ಸಾಧಿಸಿತ್ತು. ಭಾರತ ತಂಡ ಆಫ್ಘಾನ್ ಪಡೆಯನ್ನು ಕೇವಲ ಒಂದೇ ದಿನದಲ್ಲಿ ಎರಡು ಬಾರಿ ಆಲೌಟ್ ಮಾಡಿ ಸ್ಮರಣೀಯ ಜಯ ಸಾಧಿಸಿತ್ತು.

loader