ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಗೆಲುವು ಟೀಂ ಇಂಡಿಯಾಗೆ ಕಠಿಣ ಸವಾಲು. ಈ ಬಾರಿ ಭಾರತದ ಗೆಲುವಿಗೆ ಟೀಂ ಇಂಡಿಯಾ  ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದರೆ ಸಾಕೇ? ಈ ಕುರಿತು  ಆಸ್ಟ್ರೇಲಿಯಾ ಮಾಜಿ ವೇಗಿ ಹೇಳಿದ್ದೇನು? ಇಲ್ಲಿದೆ ವಿವರ. 

ಚೆನ್ನೈ (ಜು.27): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾಥ್ ಹೇಳಿದ್ದಾರೆ.

ಚೆನ್ನೈನ ಎಮ್ಆರ್‌ಎಫ್ ಪೇಸ್ ಫೌಂಡೇಶನ್‌ಗೆ ಆಗಮಿಸಿದ ವೇಳೆ ಮೆಕ್‌ಗ್ರಾಥ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಭುವನೇಶ್ವರ್ ಕುಮಾರ್ ಹಾಗೂ ಜಸ್‌ಪ್ರೀತ್ ಬುಮ್ರಾ ಇಂಜುರಿಯಿಂದ ಭಾರತದ ಬೌಲಿಂಗ್ ವಿಭಾಗ ಮೊನಚು ಕಳೆದುಕೊಂಡಿದೆ. ಹೀಗಾಗಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಬೌಲಿಂಗ್ ದಾಳಿಗೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಅನ್ನೋದರ ಮೇಲೆ ರಿಸಲ್ಟ್ ನಿರ್ಧಾರವಾಗಲಿದೆ ಎಂದಿದ್ದಾರೆ.

 ಹಿಂದಿನ ಪ್ರವಾಸದಲ್ಲಿ ಆಂಡರ್ಸನ್ ಸ್ವಿಂಗ್ ಹಾಗೂ ವೇಗಕ್ಕೆ ಭಾರತೀಯ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಅನುಭವಿ ಆಂಡರ್ಸನ್ ದಾಳಿಯನ್ನ ಸಮರ್ಥವಾಗಿ ಎದುರಿಸಿದರೆ, ಭಾರತ ಸರಣಿ ಗೆಲುವು ಸಾಧಿಸಲಿದೆ ಎಂದಿದ್ದಾರೆ.

ಚೆನ್ನೈನಲ್ಲಿರುವ ವೇಗಿಗಳ ತರಭೇತಿ ಕೇಂದ್ರ ಎಮ್ಆರ್‌ಎಫ್ ಫೌಂಡೇಶನ್‌ನಲ್ಲಿ ನಿರ್ದೇಶಕ ಹಾಗೂ ಮಾರ್ಗದರ್ಶಕರಾಗಿರುವ ಮೆಕ್‌ಗ್ರಾಥ್, ಹಲವು ಯುವ ಪ್ರತಿಭೆಗಳಿಗೆ ತರಭೇತಿ ನೀಡಿದ್ದಾರೆ.