ಕುಸ್ತಿ ಪಟು ನವ್ಜೊತ್‌ಗೆ ಡಿಎಸ್‌ಪಿ ಹುದ್ದೆ?

First Published 6, Mar 2018, 7:45 PM IST
Hope Punjab govt gives me DSP post says wrestler Navjot Kaur
Highlights

ಪಂಜಾಬ್ ಸರ್ಕಾರ್ ನವ್ಜೋತ್‌ಗೆ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ನೀಡಿ ಗೌರವಿಸಬೇಕು ಎಂದು ಸ್ಥಳೀಯ ರಾಜಕೀಯ ಪಕ್ಷ ಅಕಾಲಿ ದಳ ಆಗ್ರಹಿಸಿದೆ

ಚಂಢೀಗಡ(ಮಾ.06): ಏಷ್ಯಾ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ದಾಖಲೆ ಬರೆದ ನವ್ಜೋತ್ ಕೌರ್ ಅವರಿಗೆ ಪಂಜಾಬ್ ಸರ್ಕಾರ ಡಿಎಸ್‌ಪಿ ಹುದ್ದೆ ನೀಡಿ ಗೌರವಿಸುವ ಬಗ್ಗೆ ವಿಶ್ವಾಸ ಹೊಂದಿದ್ದಾರೆ.

ಸ್ವತಃ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೌರ್ ಅವರು ಸಿಎಂ ಅಮರೇಂದರ್ ಸಿಂಗ್ ಅವರು ನನ್ನಸಾಧನೆಯ ಬಗ್ಗೆ ಗೌರವಿಸಿದ್ದು ಪಂಜಾಬ್ ಸರ್ಕಾರ ತಮಗೆ ಡಿಎಸ್'ಪಿ ಹುದ್ದೆ ನೀಡುವ ಬಗ್ಗೆ ತಮಗೆ ಭರವಸೆಯಿದೆ. ತಾವು ಆ ವಕಾಶಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಪಂಜಾಬ್ ಸರ್ಕಾರ್ ನವ್ಜೋತ್‌ಗೆ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ನೀಡಿ ಗೌರವಿಸಬೇಕು ಎಂದು ಸ್ಥಳೀಯ ರಾಜಕೀಯ ಪಕ್ಷ ಅಕಾಲಿ ದಳ ಆಗ್ರಹಿಸಿದೆ. ಸದ್ಯ ನವ್ಜೋತ್ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

loader