ಸರ್ದಾರ್ ಸಿಂಗ್ ಜೊತೆಗೆ ಎಸ್.ವಿ ಸುನಿಲ್, ಧರ್ಮವೀರ್ ಸಿಂಗ್ ಮತ್ತು ದೀಪಿಕಾ ಅವರ ಹೆಸರನ್ನೂ ಕೂಡಾ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ನವದೆಹಲಿ(ಮೇ.01): ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್‌ ಸಿಂಗ್ ಅವರ ಹೆಸರನ್ನು ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗಾಗಿ ನೀಡುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ.

ಹಾಕಿ ಇಂಡಿಯಾ ಈ ಕುರಿತು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

2003-04ರಲ್ಲಿ ಜೂನಿಯರ್ ಟೀಂ ಪ್ರವೇಶಿಸಿದ್ದ ಸರ್ದಾರ್ 2006ರಲ್ಲಿ ಮೊದಲ ಬಾರಿ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದರು.

ಭಾರತ ಹಾಕಿ ತಂಡದ ನಾಯಕನಾದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆ ಕೂಡಾ ಸಿಂಗ್‌'ರಿಗಿದೆ. ಸರ್ದಾರ್‌ ಸಿಂಗ್‌'ಗೆ 2012ರಲ್ಲಿ ಅರ್ಜುನ ಮತ್ತು 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸರ್ದಾರ್ ಸಿಂಗ್ ಜೊತೆಗೆ ಎಸ್.ವಿ ಸುನಿಲ್, ಧರ್ಮವೀರ್ ಸಿಂಗ್ ಮತ್ತು ದೀಪಿಕಾ ಅವರ ಹೆಸರನ್ನೂ ಕೂಡಾ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಇದೇವೇಳೆ ಹಾಕಿ ತರಬೇತುದಾರರಾದ ಸಂದೀಪ್ ಸಾಂಗ್ವಾನ್ ಮತ್ತು ರೊಮೇಶ್ ಪತಾನಿಯಾ ಹೆಸರನ್ನು ಧ್ಯಾನ್'ಚಂದ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.