ಮುಂಬೈನಲ್ಲಿ ನಡೆಯುವ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಬಾಂಗ್ ಮುಂಬೈ ಮತ್ತು ರಾಂಚಿ ರೇಸ್ ತಂಡಗಳು ಸೆಣಸಲಿವೆ.

ನವದೆಹಲಿ(ನ.23): ಮುಂದಿನ ಜನವರಿ 21ರಿಂದ 5ನೇ ಆವೃತ್ತಿಯ ಹಾಕಿ ಇಂಡಿಯಾ ಲೀಗ್ ಆರಂಭವಾಗಲಿದೆ.

ಮುಂಬೈನಲ್ಲಿ ನಡೆಯುವ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ದಬಾಂಗ್ ಮುಂಬೈ ಮತ್ತು ರಾಂಚಿ ರೇಸ್ ತಂಡಗಳು ಸೆಣಸಲಿವೆ. ಸೆಮಿಫೈನಲ್ ಹಂತದ ಪಂದ್ಯಗಳು ಫೆಬ್ರವರಿ.25 ಮತ್ತು ಪ್ರಶಸ್ತಿ ಸುತ್ತಿನ ಹಣಾಹಣಿ ಫೆಬ್ರವರಿ 26ರಂದು ನಡೆಯಲಿದೆ.

ಹಾಲಿ ಚಾಂಪಿಯನ್ ಆಗಿರುವ ಚಂಡಿಗಡದ ಜೆಪಿ ಪಂಜಾಬ್ ವಾರಿಯರ್ಸ್ ಕ್ರೀಡಾಂಗಣದಲ್ಲಿ ಈ ಸೀಸನ್‌ನ ಫೈನಲ್ ಪಂದ್ಯವನ್ನು ನಡೆಸಲು ಉದ್ದೇಶಿಸಲಾಗಿದೆ. ಹಾಕಿ ಕ್ರೀಡೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ಲೀಗ್‌'ನಂತಹ ಟೂರ್ನಿಗಳನ್ನು ಆಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಮತ್ತು ಹಾಕಿ ಇಂಡಿಯಾ ಲೀಗ್‌'ನ ಮುಖ್ಯಸ್ಥ ನರೀಂದರ್ ಧ್ರುವ್ ಬಾತ್ರ ಹೇಳಿದ್ದಾರೆ.