Asianet Suvarna News Asianet Suvarna News

ಲಿಖಿತ ಕ್ಷಮಾಪಣೆ ಕೋರುವವರೆಗೂ ಪಾಕ್'ನೊಂದಿಗೆ ಹಾಕಿ ಇಲ್ಲ

ಪಾಕಿಸ್ತಾನ ಲಿಖಿತ ರೂಪದಲ್ಲಿ ಕ್ಷಣಾಪಣೆ ಕೇಳುವವರೆಗೂ ಎರಡೂ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯದು ಎಂದು ಎಚ್‌'ಐ ಹೇಳಿದೆ.

Hockey India asks for apology from Pakistan for 2014 CT incident

ನವದೆಹಲಿ(ಜ.30): ಪಾಕಿಸ್ತಾನ ಹಾಕಿ ಫೆಡರೇಷನ್(ಪಿಎಚ್‌'ಎಫ್) ಬೇಷರತ್ ಕ್ಷಮಾಪಣಾ ಪತ್ರ ನೀಡುವವರೆಗೂ ಆ ದೇಶದೊಂದಿಗೆ ಯಾವುದೇ ಸರಣಿಯನ್ನು ಆಡುವುದಿಲ್ಲ ಎಂದು ಹಾಕಿ ಇಂಡಿಯಾ(ಎಚ್‌'ಐ) ತಿಳಿಸಿದೆ.

2014ರ ಚಾಂಪಿಯನ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆಟಗಾರರ ವೃತ್ತಿಪರವಲ್ಲದ ವರ್ತನೆಗೆ ಲಿಖಿತರೂಪದಲ್ಲಿಯೇ ಕ್ಷಮಾಪಣೆ ಬೇಕೆಂದು ಎಚ್‌'ಐ ತನ್ನ ನಿಲುವು ಸ್ಪಷ್ಟಪಡಿಸಿದೆ.

ಭುವನೇಶ್ವರದಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನದ ತಂಡದ ಆಟಗಾರರು ಮೈದಾನದಲ್ಲಿಯೇ ತಮ್ಮ ಶರ್ಟ್‌ಗಳನ್ನು ಕಳಚಿ ಪ್ರೇಕ್ಷಕರ ಕಡೆಗೆ ಅಶ್ಲೀಲ ಸಂಜ್ಞೆಗಳನ್ನು ಮಾಡಿದ್ದರು. ಈ ಬಗ್ಗೆ ಕ್ಷಮಾಪಣೆ ಕೋರುವಂತೆ ಅನೇಕ ಬಾರಿ ಪಿಎಚ್‌'ಎಫ್‌'ಗೆ ನೆನಪಿಸಿದರೂ ಈವರೆಗೂ ಉತ್ತರಿಸಿಲ್ಲ. ಅದು ಲಿಖಿತ ರೂಪದಲ್ಲಿ ಕ್ಷಣಾಪಣೆ ಕೇಳುವವರೆಗೂ ಎರಡೂ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯದು ಎಂದು ಎಚ್‌'ಐ ಹೇಳಿದೆ.

ಚಾಂಪಿಯನ್ ಟ್ರೋಫಿಯನ್ನು ನೆಪವನ್ನಾಗಿಟ್ಟುಕೊಂಡು ಲಕ್ನೋದಲ್ಲಿ ಇತ್ತೀಚೆಗೆ ನಡೆದ ಕಿರಿಯರ ವಿಶ್ವಕಪ್‌'ನಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡಕ್ಕೆ ಭಾರತ ಅವಕಾಶ ನಿರಾಕರಿಸಿತ್ತು ಎಂದು ಪಿಎಚ್‌ಎಫ್‌ನ ಕಾರ್ಯದರ್ಶಿ ಶಾಬಾಜ್ ಅಹ್ಮದ್ ಇತ್ತೀಚೆಗೆ ಆರೋಪಿದಿದ್ದರು. ಈ ಆರೋಪಕ್ಕೆ ಸಂಬಂಧಿಸಿ ಎಚ್‌ಐ ಉತ್ತರಿಸಿದ್ದು ಪಾಕಿಸ್ತಾನ ತಂಡ ವೀಸಾ ಅರ್ಜಿ ಸಲ್ಲಿಸುವಲ್ಲಿ ವಿಳಂಬವಾದದ್ದು ನಿರಾಕರಣೆಗೆ ಕಾರಣವೇ ಹೊರತು ಬೇರೇನಲ್ಲ ಎಂದು ತಿಳಿಸಿದೆ.

ತನ್ನ ಆಂತರಿಕ ಕಾರಣಗಳಿಗಾಗಿ ಪಾಕಿಸ್ತಾನ ಇತರರ ಎಡೆಗೆ ಬೊಟ್ಟು ಮಾಡುವುದನ್ನು ಪಾಕಿಸ್ತಾನ ಹಾಕಿ ಫೆಡರೇಶನ್ ನಿಲ್ಲಿಸಬೇಕು ಎಂಬುದನ್ನು ನಾವು ಪುನರುಚ್ಚರಿಸುತ್ತಿದ್ದೇವೆ. ಒಂದು ಸಂಸ್ಥೆಯಾಗಿ ಅದು ಹೇಗೆ ಕಾರ್ಯನಿರ್ವಹಿಸಬೇಕೆಂಬುದನ್ನು ಅದು ಮೊದಲು ಕಲಿಯಲಿ ಎಂದು ಎಚ್‌'ಐ ತರಾಟೆಗೆ ತೆಗೆದುಕೊಂಡಿದೆ.

Follow Us:
Download App:
  • android
  • ios