ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ ಭಾರತ 4-4 ಗೋಲುಗಳ ಸಮಬಲ ಸಾಧಿಸಿದ್ದವು. ಆ ವೇಳೆ ಗೋಲ್ ಕೀಪರ್ ಸವಿತ ಅವರು ಚೀನಾ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾದರು ಆ ಬಳಿಕ ಪೆನಾಲ್ಟಿ ಶೂಟೌಟ್‌'ನಲ್ಲಿ ರೋಚಕ ಜಯ ಸಾಧಿಸಿ ರಾಣಿ ಪಡೆ ಪ್ರಶಸ್ತಿ ಎತ್ತಿಹಿಡಿದಿತ್ತು. ಇದರ ಜೊತೆಗೆ 2018ರ ಮಹಿಳಾ ವಿಶ್ವಕಪ್'ಗೂ ಆರ್ಹತೆ ಗಿಟ್ಟಿಸಿಕೊಂಡಿತ್ತು.

ನವದೆಹಲಿ(ನ.06): ಚೀನಾ ವಿರುದ್ಧ ಭರ್ಜರಿ ಜಯಭೇರಿ ಬಾರಿಸುವ ಮೂಲಕ 13 ವರ್ಷಗಳ ಬಳಿಕ ಏಷ್ಯಾ ಕಪ್ ಹಾಕಿ ಟ್ರೋಫಿ ಜಯಿಸಿದ ರಾಣಿ ರಾಂಪಾಲ್ ನೇತೃತ್ವದ ವನಿತೆಯರ ಹಾಕಿ ತಂಡಕ್ಕೆ ಹಾಕಿ ಇಂಡಿಯಾ ಭರ್ಜರಿ ಇನಾಮು ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, 13 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ ಮಾಡಿದ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿಯರಿಗೆ ಹಾಕಿ ಇಂಡಿಯಾ ತಲಾ ₹ 1 ಲಕ್ಷ ಬಹುಮಾನ ಘೋಷಿಸಿದೆ. ತಂಡದ ಎಲ್ಲಾ 18 ಆಟಗಾರ್ತಿಯರು ಹಾಗೂ ಕೋಚ್ ಹರೇಂದರ್ ಸಿಂಗ್‌ಗೆ ₹ 1 ಲಕ್ಷ ಮತ್ತು ಸಹಾಯಕ ಸಿಬ್ಬಂದಿಗೆ ತಲಾ ₹ 50,000 ಬಹುಮಾನ ನೀಡುವುದಾಗಿ ತಿಳಿಸಿದೆ.