Asianet Suvarna News Asianet Suvarna News

ಬೆಳ್ಳಿ ಪದಕ ಗೆದ್ದರೂ ಟೀಂಇಂಡಿಯಾ ಹಾಕಿ ಕೋಚ್ ನಿರಾಸೆಗೊಂಡಿದ್ದೇಕೆ?

ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ತಂಡದ ಸಾಧನೆಗೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಕೋಚ್‌ಗೆ ಬೆಳ್ಳಿ ಪದಕ ಗೆದ್ದಿರೋದು ಸಂತಸ ತಂದಿಲ್ಲ ಯಾಕೆ? ಇಲ್ಲಿದೆ ನೋಡಿ

Hockey coach Harendra Singh not satisfied by India's Champions Trophy performance

ಬೆಂಗಳೂರು(ಜು.06): ನೆದರ್ಲೆಂಡ್‌ನ ಬ್ರೆಡಾದಲ್ಲಿ ನಡೆದ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಪ್ರದರ್ಶನ ಸಂತಸ ತಂದಿದೆ ಎಂದು ಕೋಚ್ ಹರೇಂದ್ರ ಸಿಂಗ್ ಹೇಳಿದ್ದಾರೆ.  ಟೂರ್ನಿಯಲ್ಲಿ ನಾವು ಬೆಳ್ಳಿ ಪದಕ ಗೆದ್ದಿದ್ದೇವೆ. ಆದರೆ ಬೆಳ್ಳಿ ಪದಕ್ಕಿಂತ ಟೂರ್ನಿಯುದ್ದಕ್ಕೂ ತಂಡದ ಪ್ರದರ್ಶನ ಹೆಚ್ಚು ಸಂತಸ ತಂದಿದೆ ಎಂದಿದ್ದಾರೆ.

ತಂಡದಲ್ಲಿ ಕೆಲವು ಮಹತ್ವದ ಸಕಾರಾತ್ಮಕ ಬದಲಾವಣೆಗಳಾಗಿವೆ. ಮುಂದಿನ ದಿನಗಳಲ್ಲಿ ಬೆಳ್ಳಿ ಪದಕವನ್ನು ಬಂಗಾರದ ಪದಕವನ್ನಾಗಿಸಲು ಪ್ರಯತ್ನಿಸುತ್ತೇನೆ’ ಎಂದು ಹರೇಂದ್ರ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಅನುಭವಿಸಿತ್ತು. ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. 

ಪಂದ್ಯ 1-1 ಅಂತರದಿಂದ ಸಮಭಗೊಂಡಿತ್ತು. ಹೀಗಾಗಿ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾ 3-1 ಅಂತರದಲ್ಲಿ ಗೆಲುವು ಸಾಧಿಸಿತ್ತು.

Follow Us:
Download App:
  • android
  • ios