ಎಲ್ಲಾ ಜಲಕ್ರೀಡೆಯನ್ನು ಬ್ಯಾನ್ ಮಾಡಿದ ಹೈಕೋರ್ಟ್..!

High court bans all water sports in Uttarakhand
Highlights

ಪ್ರತಿವರ್ಷ ರ‍್ಯಾಪ್ಟಿಂಗ್ ವೇಳೆ ಬೋಟುಗಳಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿದ್ದು, ಕುಶಲ ಈಜುಗಾರರನ್ನು ಕಡ್ಡಾಯವಾಗಿ ನೇಮಿಸಬೇಕು ಎಂದು ಸೂಚಿಸಿದೆ. ಮೋಜು-ಮಸ್ತಿ ಹೆಸರಿನಲ್ಲಿ ಜೀವಕ್ಕೆ ಕಂಟಕವಾಗುವ ಕ್ರೀಡೆಯನ್ನು ಒಪ್ಪಲು ಸಾಧ್ಯವಿಲ್ಲ. ಬಿಡ್’ಗಳನ್ನು ಕರೆದು, ನ್ಯಾಯಸಮ್ಮತವಾದ ಬೆಲೆಯನ್ನು ನಿರ್ಧರಿಸಬೇಕು. ಇವೆಲ್ಲವು ಪಾರದರ್ಶಕವಾಗಿರಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

ನೈನಿತಾಲ್[ಜೂ.22]: ರಿವರ್ ರ‍್ಯಾಪ್ಟಿಂಗ್, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲಾ ಬಗೆಯ ಜಲಕ್ರೀಡೆಗಳ ಮೇಲೆ ಉತ್ತರಖಾಂಡ ಹೈಕೋರ್ಟ್ ನಿಷೇಧ ಹೇರಿದ್ದು, ಸಾಹಸ ಕ್ರೀಡೆ ವಿಭಾಗ ಶೀಘ್ರದಲ್ಲಿಯೇ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಈ ಕುರಿತಂತೆ ಎರಡು ವಾರಗಳೊಳಗಾಗಿ ಪಾರದರ್ಶಕ ಯೋಜನೆ ರೂಪಿಸಬೇಕು ಎಂದು ರಾಜ್ಯಸರ್ಕಾರಕ್ಕೆ ನಿರ್ದೆಶನ ನೀಡಿದೆ.

ಪ್ರತಿವರ್ಷ ರ‍್ಯಾಪ್ಟಿಂಗ್ ವೇಳೆ ಬೋಟುಗಳಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿದ್ದು, ಕುಶಲ ಈಜುಗಾರರನ್ನು ಕಡ್ಡಾಯವಾಗಿ ನೇಮಿಸಬೇಕು ಎಂದು ಸೂಚಿಸಿದೆ. ಮೋಜು-ಮಸ್ತಿ ಹೆಸರಿನಲ್ಲಿ ಜೀವಕ್ಕೆ ಕಂಟಕವಾಗುವ ಕ್ರೀಡೆಯನ್ನು ಒಪ್ಪಲು ಸಾಧ್ಯವಿಲ್ಲ. ಬಿಡ್’ಗಳನ್ನು ಕರೆದು, ನ್ಯಾಯಸಮ್ಮತವಾದ ಬೆಲೆಯನ್ನು ನಿರ್ಧರಿಸಬೇಕು. ಇವೆಲ್ಲವು ಪಾರದರ್ಶಕವಾಗಿರಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

ರಿಷಿಕೇಶ್ ನಿವಾಸಿಯಾಗಿರುವ ಹರಿ ಓಂ ಕಶ್ಯಪ್, ಗಂಗಾ ನದಿ ತಟದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಉದ್ಯಮಿಗಳು ತಾತ್ಕಾಲಿಕವಾಗಿ ರಿವರ್ ರ‍್ಯಾಪ್ಟಿಂಗ್ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಸರ್ಕಾರಕ್ಕೆ ಇನ್ನೆರಡು ವಾರದಲ್ಲಿ ಉತ್ತರಿಸುವಂತೆ ತಿಳಿಸಿದೆ. 

loader