ಸೆಮಿಫೈನಲ್ ಸುತ್ತಿನಲ್ಲಿ ಸಿಂಧು 574 ಅಂಕಗಳಿಸಿ ಎಂಟು ಮಂದಿ ಶೂಟರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು.
ನವದೆಹಲಿ(ಡಿ.18): ಭಾರತದ ಯುವ ಸ್ಟಾರ್ ಮಹಿಳಾ ಶೂಟರ್ ಹೀನಾ ಸಿಧು, 60ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್'ನ ಮಹಿಳೆಯರ 25ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ.
ಸೆಮಿಫೈನಲ್ ಸುತ್ತಿನಲ್ಲಿ ಸಿಂಧು 574 ಅಂಕಗಳಿಸಿ ಎಂಟು ಮಂದಿ ಶೂಟರ್ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು.
ಇನ್ನು ಮಧ್ಯಪ್ರದೇಶದ ಸುರಭಿ ಪಾಟಕ್ 579 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಯುವ ಶೂಟರ್'ಗಳಾದ ರಹಿ ಸರ್ನಾಬೋಟ್ ಮತ್ತು ಅನ್ನು ರಾಜ್ ಸಿಂಗ್, ಹೀನಾ ಸಿಧು ಅವರ ನಂತರದ ಸ್ಥಾನ ಪಡೆದಿದ್ದಾರೆ.
ತಂಡದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಹರಿಯಾಣ ತಂಡವನ್ನು ಪ್ರತಿನಿಧಿಸುತ್ತಿರುವ ಮುಸ್ಕಾನ್ 573 ಅಂಕಗಳೊಂದಿಗೆ 4ನೇ ಸ್ಥಾನ ಪಡೆದಿದ್ದಾರೆ.
