ತೀರ್ಪಿನಲ್ಲಿ ಚೆಂಡು ಸ್ಪಷ್ಟವಾಗಿ ಎಲ್'ಬಿಡಬ್ಲ್ಯೂಆಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಮೂರನೇ ಅಂಪೈರ್ ಔಟ್ ಎಂದು ತೀರ್ಮಾನ ನೀಡಿದರು.
ಕ್ರಿಕೆಟ್ ಕಾಶಿ ಲಾರ್ಡ್ಸ್'ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮಹಿಳೆಯರ ತಂಡಗಳು ವಿಶ್ವಕಪ್ ಫೈನಲ್'ನಲ್ಲಿ ಪ್ರಶಸ್ತಿಗಾಗಿ ಕಾದಾಡುತ್ತಿವೆ.
ಚೊಚ್ಚಲ ವಿಶ್ವಕಪ್ ಕನಸಿನಲ್ಲಿರುವ ಮಿಥಾಲಿ ಪಡೆಗೆ ಫೈನಲ್ ಪಂದ್ಯದಲ್ಲಿ ಡಿಆರ್'ಎಸ್ ನಿಯಮ ಕೂಡಾ ಈ ಬಾರಿ ನೆರವಿಗೆ ಬಂತು. ಹೌದು ಪೂನಮ್ ರಾವತ್ ಎಸೆದ ಎರಡನೇ ಓವರ್ ಮೊದಲ ಎಸೆತದಲ್ಲಿ ಹೀತರ್ ನೈಟ್ ಕಾಲಿಗೆ ನೇರವಾಗಿ ಚೆಂಡು ತಾಗಿದರೂ ಅಂಪೈರ್ ನಾಟೌಟ್ ತೀರ್ಪು ನೀಡಿದರು. ಟೀಂ ಇಂಡಿಯಾ ಆಟಗಾರ್ತಿಯರ ಬಲವಾದ ಮನವಿಯನ್ನು ಅಂಪೈರ್ ಪುರಸ್ಕರಿಸದ ಹಿನ್ನೆಲೆಯಲ್ಲಿ ಮಿಥಾಲಿ ರಾಜ್ ಡಿಸಿಶನ್ ರಿವಿವ್ಯೂ ಸ್ಟಿಸ್ಟಂ(ಡಿಆರ್'ಎಸ್) ಮೊರೆ ಹೊದರು.
ತೀರ್ಪಿನಲ್ಲಿ ಚೆಂಡು ಸ್ಪಷ್ಟವಾಗಿ ಎಲ್'ಬಿಡಬ್ಲ್ಯೂಆಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಮೂರನೇ ಅಂಪೈರ್ ಔಟ್ ಎಂದು ತೀರ್ಮಾನ ನೀಡಿದರು. ಹಾಗಾಗಿ ಡಿಆರ್'ಎಸ್ ನಿಯಮ ಭಾರತಕ್ಕೆ ನೆರವಾಯಿತು..
ಹೀಗಿತ್ತು ಆ ಕ್ಷಣ..
