ಐಪಿಎಲ್'ನಲ್ಲಿ ಕೋಲ್ಕತ ನೈಟ್'ರೈಡರ್ಸ್ ಪರ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಆಗಿ ಕಾಣಿಸಿಕೊಳ್ಳುತ್ತಿರುವ ಕನ್ನಡದ ಕಲಿ ರಾಬಿನ್ ಉತ್ತಪ್ಪ, ತಾವಾಡಿದ ಒಂಬತ್ತು ಪಂದ್ಯಗಳಿಂದ ಮೂರು ಅರ್ಧಶತಕ ಸೇರಿದಂತೆ 282ರನ್ ಬಾರಿಸಿದ್ದಾರೆ.
ಪುಣೆ(ಏ.28): ದೇಸಿ ಕ್ರಿಕೆಟ್'ನಲ್ಲಿ ಸಾಧಾರಣ ಪ್ರದರ್ಶನ ತೋರಿದ್ದ ಕರ್ನಾಟಕದ ರಾಬಿನ್ ಉತ್ತಪ್ಪ, ಪ್ರಸಕ್ತ ಆವೃತ್ತಿಯ ಐಪಿಎಲ್'ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುವ ಮೂಲಕ ತಮ್ಮಲ್ಲಿನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇದೆ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ.
ಇದೇ ಲಯವನ್ನು ಮುಂದುವರಿಸುವ ಮೂಲಕ ಮತ್ತೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ‘‘ನಿವೃತ್ತಿಗೂ ಮುನ್ನ ಭಾರತ ಪರ ಟೆಸ್ಟ್ ಆಡುವ ಕನಸಿದೆ. ಕಠಿಣ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದು ನನ್ನ ನಂಬಿಕೆಯಾಗಿದೆ. ನನ್ನ ವೃತ್ತಿಬದುಕಿನಲ್ಲಿ ಮತ್ತೊಂದು ತಿರುವು ದೊರೆಯಲಿದೆ ಎಂಬ ಬಲವಾದ ನಂಬಿಕೆಯಿದೆ'' ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಐಪಿಎಲ್'ನಲ್ಲಿ ಕೋಲ್ಕತ ನೈಟ್'ರೈಡರ್ಸ್ ಪರ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಆಗಿ ಕಾಣಿಸಿಕೊಳ್ಳುತ್ತಿರುವ ಕನ್ನಡದ ಕಲಿ ರಾಬಿನ್ ಉತ್ತಪ್ಪ, ತಾವಾಡಿದ ಒಂಬತ್ತು ಪಂದ್ಯಗಳಿಂದ ನಾ ಅರ್ಧಶತಕ ಸೇರಿದಂತೆ 331ರನ್ ಬಾರಿಸಿದ್ದಾರೆ.
