ಪತ್ನಿ ಮೊದಲ ಮದುವೆ ಬಗ್ಗೆ ಮುಚ್ಚಿಟ್ಟಿದ್ದಳು; ಶಮಿ

First Published 16, Mar 2018, 11:04 AM IST
Hasin Jahan lied about 1st marriage Says Mohammed Shami
Highlights

ತಮ್ಮ ಪತ್ನಿ ಜಹಾನ್ ವಿರುದ್ಧ ಗುಡುಗಿರುವ ಶಮಿ, ಹಸೀನ್ ತನ್ನ ಮೊದಲ ಮದುವೆ ಬಗ್ಗೆ ಮುಚ್ಚಿಟ್ಟಿದ್ದಳು. ತನ್ನ ಇಬ್ಬರು ಮಕ್ಕಳನ್ನು ಅಕ್ಕನ ಮಕ್ಕಳು ಎಂದು ಹೇಳಿ ನಂಬಿಸಿದ್ದಳು ಎಂದು ದೂರಿದ್ದಾರೆ. ‘ಸತ್ಯವಾಗಲು ಹೇಳಬೇಕೆಂದರೆ ಆಕೆಗಿದು 2ನೇ ಮದುವೆ ಎಂಬುದೇ ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ.

ನವದೆಹಲಿ(ಮಾ.16): ಅತ್ತ ಮ್ಯಾಚ್‌ ಫಿಕ್ಸಿಂಗ್ ಕುರಿತು ಬಿಸಿಸಿಐ ತನಿಖೆ ಚುರುಕುಗೊಳಿಸಿದ್ದರೆ, ಇತ್ತ ಶಮಿ ಹಾಗೂ ಅವರ ಪತ್ನಿ ಹಸೀನ್ ಜಹಾನ್ ನಡುವಿನ ಪರಸ್ಪರ ಕೆಸರೆರಚಾಟ ಮುಂದುವರಿದಿದೆ.

ತಮ್ಮ ಪತ್ನಿ ಜಹಾನ್ ವಿರುದ್ಧ ಗುಡುಗಿರುವ ಶಮಿ, ಹಸೀನ್ ತನ್ನ ಮೊದಲ ಮದುವೆ ಬಗ್ಗೆ ಮುಚ್ಚಿಟ್ಟಿದ್ದಳು. ತನ್ನ ಇಬ್ಬರು ಮಕ್ಕಳನ್ನು ಅಕ್ಕನ ಮಕ್ಕಳು ಎಂದು ಹೇಳಿ ನಂಬಿಸಿದ್ದಳು ಎಂದು ದೂರಿದ್ದಾರೆ. ‘ಸತ್ಯವಾಗಲು ಹೇಳಬೇಕೆಂದರೆ ಆಕೆಗಿದು 2ನೇ ಮದುವೆ ಎಂಬುದೇ ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಶೇಖ್ ಸೈಫುದ್ದೀನ್ ಎಂಬುವರನ್ನು ಜಹಾನ್ ಮೊದಲು ಮದುವೆಯಾಗಿದ್ದಳು. ಅವರಿಗೆ 2 ಹೆಣ್ಣು ಮಕ್ಕಳು ಜನಿಸಿದ್ದವು. 2010ರಲ್ಲಿ ಆತನಿಗೆ ವಿವಾಹ ವಿಚ್ಛೇದನ ನೀಡಿದ್ದಳು. ವಿಚ್ಛೇದನದ ಬಳಿಕ ಆ 2 ಮಕ್ಕಳು ಮೊದಲ ಪತಿಯ ಜತೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

loader