ವಿಶ್ವ ಇಲೆವನ್ ತಂಡವು ಸೆಪ್ಟೆಂಬರ್ ತಿಂಗಳಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಲಾಹೋರ್'ನಲ್ಲಿ ಸೆ.9ರಿಂದ 15ರವರೆಗೆ 3 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ.

ಕರಾಚಿ(ಆ.24): ಪಾಕಿಸ್ತಾನ ವಿರುದ್ಧ ಸೆಪ್ಟೆಂಬರ್'ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ವಿಶ್ವ ಇಲೆವೆನ್ ತಂಡವನ್ನು ದ.ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿ ಅಥವಾ ಹಾಶಿಂ ಆಮ್ಲಾ ಮುನ್ನಡೆಸಲಿದ್ದಾರೆ. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಣೆ ನೀಡಿದೆ.

ಮೂಲಗಳ ಪ್ರಕಾರ ಐಸಿಸಿ ಹಾಗೂ ಪಿಸಿಬಿ ಹಣಕಾಸು ಹಾಗೂ ಆಟಗಾರರ ವಿಮೆ ವಿಚಾರವಾಗಿ ಪ್ರಕ್ರಿಯೆ ಆರಂಭಿಸಿದ್ದು ಸದ್ಯದಲ್ಲೇ ವಿಶ್ವ ಇಲೆವೆನ್ ತಂಡವನ್ನು ಪ್ರಕಟಿಸಲಾಗುವುದು ಎನ್ನಲಾಗಿದೆ.

7 ರಾಷ್ಟ್ರಗಳ ಒಟ್ಟು 15 ಆಟಗಾರರು ವಿಶ್ವ ಇಲೆವೆನ್ ತಂಡದಲ್ಲಿ ಆಡಲು ಸಮ್ಮತಿ ಸೂಚಿಸಿದ್ದಾರೆ ಎಂದು ಪಿಸಿಬಿ ನೂತನ ಅಧ್ಯಕ್ಷ ನಜಮ್ ಸೇಠಿ ತಿಳಿಸಿದ್ದಾರೆ.

ವಿಶ್ವ ಇಲೆವನ್ ತಂಡವು ಸೆಪ್ಟೆಂಬರ್ ತಿಂಗಳಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಲಾಹೋರ್'ನಲ್ಲಿ ಸೆ.9ರಿಂದ 15ರವರೆಗೆ 3 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ.

ವಿಶ್ವ ಇಲೆವನ್ ತಂಡವನ್ನು ಶುಕ್ರವಾರ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.