ಇದೇವೇಳೆ ಶಾಸ್ತ್ರಿ ಹೇಳಿಕೆ ವಿವೇಚನಾರಹಿತವಾದದ್ದು(ನಾನ್’ಸೆನ್ಸ್) ಎಂದು ಗವಾಸ್ಕರ್ ಕಿಡಿಕಾರಿದ್ದಾರೆ. ತೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್ ಹಾಗೂ ಇತರ ಆಟಗಾರರು ಯಾವಾಗಲೂ ತಂಡದ ಗೆಲುವಿಗಾಗಿ ಹೋರಾಟ ನಡೆಸುಯತ್ತಿದ್ದರು ಎಂದಿದ್ದಾರೆ.

ಮುಂಬೈ(ಡಿ.19): ಸರಣಿ ಗೆಲ್ಲಲು ನಾವು ದಕ್ಷಿಣ ಆಫ್ರಿಕಾಗೆ ಹೋಗುತ್ತಿದ್ದೇವೆಯೇ ಕಾಲಾಹರಣಕ್ಕಲ್ಲ ಎನ್ನುವ ಹೇಳಿಕೆಯೊಂದಿಗೆ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ, ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಚರ್ಚೆಗೆ ಆಸ್ಪದ ನೀಡಿದ್ದಾರೆ.

ಶಾಸ್ತ್ರಿ ಹೇಳಿಕೆ ಗೊಂದಲ ಸೃಷ್ಟಿಸಿದ್ದು, ಈ ಮೊದಲು ಪ್ರವಾಸ ಕೈಗೊಳ್ಳುತ್ತಿದ್ದ ತಂಡಗಳು ಕಾಲಾಹರಣ ಮಾಡಿ, ವಾಪಸಾಗುತ್ತಿದ್ದವಾ? ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ಆರಂಭವಾಗಿದೆ. ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಶಾಸ್ತ್ರಿ ‘ಕೊಹ್ಲಿ ಹಾಗೂ ನನ್ನ ಮನಸ್ಥಿತಿ ಒಂದೇ ರೀತಿ ಇದೆ. ಇಬ್ಬರೂ ಯಾವುದೇ ಕಾರಣಕ್ಕೂ ಸೋಲು ಒಪ್ಪಿಕೊಳ್ಳಲು ಸಿದ್ಧರಿಲ್ಲ’ ಎಂದಿದ್ದಾರೆ.

ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ಎಂ.ಎಸ್. ಧೋನಿ ಅವರಂತಹ ಆಟಗಾರರು ಪಂದ್ಯ ಗೆಲ್ಲಲೂ ಶ್ರಮಪಟ್ಟಿರಲಿಲ್ಲವೇ..? ಅವರೆಲ್ಲ ಕಾಲಾಹರಣ ಮಾಡಲು ಪ್ರವಾಸ ಕೈಗೊಳ್ಳುತ್ತಿದ್ದರೆ ಎಂಬ ವಾದಾ ಆರಂಭವಾಗಿದೆ.

ಇದೇವೇಳೆ ಶಾಸ್ತ್ರಿ ಹೇಳಿಕೆ ವಿವೇಚನಾರಹಿತವಾದದ್ದು(ನಾನ್’ಸೆನ್ಸ್) ಎಂದು ಗವಾಸ್ಕರ್ ಕಿಡಿಕಾರಿದ್ದಾರೆ. ತೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್ ಹಾಗೂ ಇತರ ಆಟಗಾರರು ಯಾವಾಗಲೂ ತಂಡದ ಗೆಲುವಿಗಾಗಿ ಹೋರಾಟ ನಡೆಸುಯತ್ತಿದ್ದರು ಎಂದಿದ್ದಾರೆ.

ಇದೇ ವೇಳೆ, ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವ ಸುಳಿವನ್ನು ಶಾಸ್ತ್ರಿ ನೀಡಿದ್ದಾರೆ.