ಮೊದಲಾರ್ಧದ ಆರಂಭದಲ್ಲಿ ಎರಡು ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದ ಹರ್ಯಾಣಕ್ಕೆ ಸುಖೇಶ್ ಹೆಗ್ಡೆ ನೇತೃತ್ವದ ಗುಜರಾತ್ ಫಾರ್ಚೂನ್'ಜೈಂಟ್ಸ್ ಪ್ರಬಲ ಪೈಪೋಟಿ ನೀಡಿತು.
ನಾಗ್ಪುರ(ಆ.08): ವಿಕಾಸ್ ಖಂಡೋಲಾ ಬಿರುಸಿನ ರೈಡಿಂಗ್ ಹಾಗೂ ಸುರೇಂದರ್ ನಾಡಾ ಮತ್ತು ಮೋಹಿತ್ ಚಿಲ್ಲಾರ್ ಆಕರ್ಷಕ ಟ್ಯಾಕಲ್'ಗಳ ನೆರವಿನಿಂದ ಗುಜರಾತ್ ಫಾರ್ಚೂನ್'ಜೈಂಟ್ಸ್ ಎದುರು ಹರಿಯಾಣ ಸ್ಟೀಲರ್ಸ್ ಭರ್ಜರಿ ಜಯಭೇರಿ ಬಾರಿಸಿದೆ.
ಮೊದಲಾರ್ಧದ ಆರಂಭದಲ್ಲಿ ಎರಡು ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದ ಹರ್ಯಾಣಕ್ಕೆ ಸುಖೇಶ್ ಹೆಗ್ಡೆ ನೇತೃತ್ವದ ಗುಜರಾತ್ ಫಾರ್ಚೂನ್'ಜೈಂಟ್ಸ್ ಪ್ರಬಲ ಪೈಪೋಟಿ ನೀಡಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಹರ್ಯಾಣ 13-9 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು.
ಕೇವಲ 4 ಅಂಕಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಸುರೇಂದರ್ ನಾಡಾ ಬಳಗ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಪಂದ್ಯದ 30ನೇ ನಿಮಿಷದಲ್ಲಿ ಹರ್ಯಾಣ 23-13 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ಆ ಬಳಿಕವೂ ಪಂದ್ಯದ ಮೇಲೆ ಹಿಡಿತ ಸಡಿಲಿಸದ ಹರ್ಯಾಣ ಸ್ಟೀಲರ್ಸ್ ಅಂತಿಮವಾಗಿ 32-20 ಅಂಕಗಳಿಂದ ಪಂದ್ಯವನ್ನು ತಮ್ಮದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಹರ್ಯಾಣ ಸ್ಟೀಲರ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.
